ಬಾಲಿವುಡ್ ಕ್ವೀನ್ ಚಿತ್ರದ ನಾಯಕಿ ಗೊತ್ತಲ್ಲ… ಅದೇ ಲೀಸಾ ಹೇಡನ್. ಇದೇ ಲೀಸಾ ಹೇಡನ್ ಮತ್ತು ನಟ ರಣ್‌ದೀಪ್ ಹೂಡಾ ಎಂಬಿಬ್ಬರು ನಿನ್ನೆ-ಮೊನ್ನೆ ಅರ್ಧರಾತ್ರೀಲಿ, ಹೈವೇ ರಸ್ತೇಲಿ… ಜನಗಳ ಕೈಗೆ ಸಿಕ್ಕಿಬಿದ್ರಂತೆ. ಅದೆಲ್ಲಿದ್ರೋ ನಮ್ಮ ಛಾಯಾಗ್ರಾಹಕರು ಸ್ಥಳಕ್ಕೆ ಧಾವಿಸಿದ್ದೇ ಧಾವಿಸಿದ್ದು…
ಮೇಲಿಂದ ಮೇಲೆ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು… ಸರಿ ಬೆಳಗಾಗುವಷ್ಟರಲ್ಲಿ ಬಾಲಿವುಡ್ ಕ್ಯಾಂಪ್‌ಗಳಲ್ಲಿ ಅದೇ ಸುದ್ದಿ, ಅದೇ ಮಾತು.
ಅಬ್ಬಬ್ಬಾ… ರಣ್‌ದೀಪ್ ಹೂಡಾ, ಲೀಸಾ ಹೇಡನ್ ಮಧ್ಯರಾತ್ರೀಲಿ ಸಿಕ್ಕಿಬಿದ್ರಂತೆ… ಅಂದ್ರೆ ಅವರಿಬ್ಬರ ನಡುವೆ ಸಮ್‌ಥಿಂಗ್ ಇರ್ಲೇ್ಬೇಕಲ್ಲಪ್ಪಾ… ಅಂತ ತಲೆಕೆಡಿಸಿಕೊಂಡ್ರಂತೆ. ಹೇಗಾದ್ರೂ ಆಗ್ಲಿ ಒಂದ್ ಮಾತ್ ಕೇಳವಾ ಅಂತ ಸೀದಾ ಲೀಸಾಳ ಬಳಿ ಹೋಗಿ ಹಿಂಗ್ಹಿಂಗೆ ನಡೀತಂತೆ ನಿಜವಾ ಮೇಡಂ….
ಅಂತ ಹಲ್ಲು ಗಿಂಜಿದರಂತೆ. ಅದಕ್ಕೆ ಲೀಸಾ ಹೂಡಾ… ಹೋಗ್ರೀ… ಹೋಗ್ರೀ… ನಂಗೆ ಆ ರಣಬೀರ್ ಹೂಡ ಏನು ಕ್ಲೋಸ್ ಫ್ರೆಂಡ್ ಅಲ್ಲ… ಸುಮ್ಮನೇ ಪರಿಚಯ ಅಷ್ಟೇ… ಮತ್ತೇಕೆ ಹೋಗಿದ್ರಿ ಅಂದ್ರೆ, ಯಾರ ಬಳಿಯೋ ಏನೋ ಬಿಸಿನೆಸ್ ಮ್ಯಾಟರ್ ಮಾತಾಡ್ಲಿಕ್ಕೆ ಹೋಗಿದ್ದು ಅಂದ್ಲಂತೆ!