ಮನೋರಂಜನೆ

ನಾನು ಹೆಂಡತಿಗೆ ಹೆದರುತ್ತೇನೆ: ಅಕ್ಷಯ್ ಕುಮಾರ್

Pinterest LinkedIn Tumblr

akshಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಸಿಂಗ್ ಈಸ್ ಬ್ಲಿಂಗ್ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಕೂಡ ಅಕ್ಕಿ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಕೂಡ ಅಕ್ಷಯ್ ಕುಮಾರ್ ಅನೇಕ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಸಿನಿಮಾದಲ್ಲಿ ವಿಲನ್ ಗಳನ್ನು ಬಗ್ಗು ಬಡಿಯೋ ಅಕ್ಕಿ ನಿಜ ಜೀವನದಲ್ಲಿ ತಮ್ಮ ಪತ್ನಿಗೇ ಹೆದರುತ್ತಾರಂತೆ.

ಇತ್ತೀಚೆಗೆ ಸಂದರ್ಶವೊಂದರಲ್ಲಿ ಮಾತನಾಡಿದ ಅಕ್ಷಯ್ ಕುಮಾರ್ಟ್ವಿಂಕಲ್ ಖನ್ನಾ ಅವರಿಗೆ ಭಯಪಡುತ್ತೇನೆ ಅನ್ನೋ ಸಿಕ್ರೇಟ್ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ಟ್ವಿಂಕಲ್ ಖನ್ನಾ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಆಮೀರ್ ಖಾನ್ ಟ್ವಿಂಕಲ್ ಜನರನ್ನು ಅವಮಾನಿಸೋದರಲ್ಲಿ ನಂಬರ್ ಒನ್ ಎಂದಿದ್ದರು. ನನ್ನನ್ನು ಆಕೆ ಅನೇಕ ಬಾರಿ ಅನೇಕ ಹೀಯಾಳಿಸಿದ್ದಾಳೆ ಎಂದಿದ್ದರು. ಆದ್ರೆ ಅಕ್ಷಯ್ ಕುಮಾರ್ ಕೂಡ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಟ್ವಿಂಕಲ್ ಖನ್ನಾಳ ಈ ಗುಣ ನನಗೆ ಇಷ್ಟ. ಆದ್ರೆ ಕೆಲವೊಮ್ಮೆ ನನ್ನನ್ನು ಎಲ್ಲಿ ಅವಮಾನಿಸಿ ಬಿಡುತ್ತಾಳೋ ಅನ್ನೋ ಭಯ ನನ್ನನ್ನು ಕಾಡುತ್ತದೆ ಎಂದು ಅಕ್ಕಿ ಹೇಳಿದ್ದಾರೆ. ಏನೇ ಇರಲಿ ಅಕ್ಕಿ ಪತ್ನಿಗೆ ಹೆದರುತ್ತಾರೆ ಅನ್ನೋದು ಮಾತ್ರ ಈಗ ಜಗಜ್ಜಾಹೀರಾಗಿದೆ.

Write A Comment