ರಾಷ್ಟ್ರೀಯ

300 ವರ್ಷ ಹಳೆಯ ಉರ್ದು ಮಹಾಭಾರತ ಕೃತಿ ಪತ್ತೆ !

Pinterest LinkedIn Tumblr

maha bharath

ಲಕ್ನೊ, ಅ.3: 300 ವರ್ಷಗಳ ಹಳೆಯ ಉರ್ದು ಮಹಾಭಾರತ ಕೃತಿಯೊಂದು ಉತ್ತರ ಪ್ರದೇಶದ ಲಖನೌದ ಹಳೆಯ ಭಾಗದ ಕರ್ಬಲಾ ಕಾಲೋನಿಯಲ್ಲಿ ಪತ್ತೆಯಾಗಿದ್ದು, ಅದರ ಪ್ರಸ್ತಾವನೆ ಅರೆಬಿಕ್ ಮತ್ತು ಪರ್ಶಿಯನ್ ಭಾಷೆಯಲ್ಲಿದೆ.

ಅಷ್ಟೊಂದು ಹಳೆಯ ಮತ್ತು ಅಮೂಲ್ಯ ಕೃತಿಯ ಬಗ್ಗೆ ಮಂಜುಲ್ಸ್ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಫರ್ಮಾನ್ ಅವರ ಕುಟುಂಬದ ಹಿರಿಯ ಮುತ್ತಜ್ಜ ಹವಾಲಿ ಹುಸೈನ್ ನಸೀರ್ಬದಿ ಅವರು ರಾಯಬರೇಲಿಯಲ್ಲಿ ಸ್ಥಾಪಿಸಿದ್ದ ಗ್ರಂಥಾಲಯವನ್ನು ಕುಟುಂಬದ ಸದಸ್ಯರು ಸ್ಥಳಾಂತರಿಸುತ್ತಿದ್ದಾಗ ಈ ಅಮೂಲ್ಯ ಕೃತಿ ಕಂಡುಬಂದಿದೆ.

ಕಳೆದ ಐದು ತಲೆಮಾರುಗಳಿಂದ ಈ ಪವಿತ್ರ ಗ್ರಂಥವನ್ನು ನಮ್ಮ ಕುಟುಂಬ ಕಾಪಾಡಿಕೊಂಡು ಬಂದಿದೆ ಎಂದು ಫರ್ಮಾನ್ ಅವರ ತಾಯಿ ಶಾಹಿನ್ ಅಕ್ತರ್ ಬಹಿರಂಗಪಡಿಸಿದ್ದಾರೆ.

ನನ್ನ ತಂದೆ ತೀರಿಕೊಂಡ ಬಳಿಕ ಬಹುಶ ಈ ಕೃತಿ ತಪ್ಪಾದ ಜಾಗದಲ್ಲಿ ಇಡಲಾಗಿತ್ತು ಎಂದು ಫರ್ಮಾನ್ ಹೇಳುತ್ತಾರೆ. ಇದೀಗ ಅವರು ಈ ಕೃತಿಯನ್ನು ಜೋಪಾನವಾಗಿ ಇಟ್ಟಿದ್ದಾರೆ. ಕುಟುಂಬದ ಆಪ್ತ ಹಾಗೂ ಧಾರ್ಮಿಕ ಶಿಕ್ಷಕ ವಹೀದ್ ಅಬ್ಬಾಸ್ ಅವರು ಈ ಪುಸ್ತಕವನ್ನು ವಿಸ್ತøತವಾಗಿ ಅಧ್ಯಯನ ಮಾಡಿದ್ದಾರೆ.

“ಇದು ನಮ್ಮ ಗಂಗಾ-ಜಮುನಾ ಸಂಪ್ರದಾಯದ ಒಂದು ಪ್ರತೀಕ ಮತ್ತು ಇದನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾಗಿದೆ” ಎಂದು ಅವರು ಹೇಳುತ್ತಾರೆ. ಹಾಜಿ ತಾಲಿಬ್ ಹುಸೈನ್ ಮತ್ತು ಅವರ ಗೆಳೆಯ ದುರ್ಗಾ ಪ್ರಸಾದ್ ಅವರು ಉರ್ದು ಓದುಗರಿಗಾಗಿ ಈ ಕೃತಿಯನ್ನು ರಚಿಸಿದ್ದಾರೆ ಎನ್ನಲಾಗಿದೆ.

ಶಿಯಾ ಪಂಥದವರಾದ ಮಂಜುಲ್ ಕುಟುಂಬ ಹಿಂದಿನಿಂದಲೂ ಕೋಮು ಸೌಹಾರ್ದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದು, ಇದು ಕೂಡ ಒಂದು ನಿದರ್ಶನವಾಗಿದೆ. “ಇದೊಂದು ಭಾಷಾಂತರ ಸಾಹಿತ್ಯವಲ್ಲ. ಇದು ಕತೆಯ ರೂಪದಲ್ಲಿ ಸರಳ ಭಾಷೆಯಲ್ಲಿರುವ ವಿಸ್ತøತ ಕೃತಿಯಾಗಿದೆ” ಎಂದು ಅಬ್ಬಾಸ್ ವಿವರಿಸುತ್ತಾರೆ. ಪ್ರತಿಯೊಂದು ಅಧ್ಯಾಯದ ಆರಂಭದಲ್ಲೂ ಅರೆಬಿಕ್ ಪದ್ಯದ ಮೂಲಕ ಸುಂದರವಾದ ವಿವರಣೆ ನೀಡಲಾಗಿದೆ.

300 ವರ್ಷಗಳ ಹಳೆಯ ಮಹಾಭಾರತ ನಮ್ಮ ಜೀವನವನ್ನು ಬದಲಾಯಿಸಿದೆ. ಈ ದಿನಗಳಲ್ಲಿ ನಾವು ಅನಿರೀಕ್ಷಿತ ಅತಿಥಿಯೊಬ್ಬರನ್ನು ಸ್ವೀಕರಿಸಿದ್ದೇವೆ ಎಂದು ಶಾಹಿನ್ ಹೇಳುತ್ತಾರೆ

Write A Comment