ಪಿಕೆ ಸಿನಿಮಾದ ಬಳಿಕ ಆಮೀರ್ ಖಾನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ದಾಂಗಲ್. ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. ಲೂಧಿಯಾನಾದ ಗುಜ್ಜರ್ ವಾಲಾ ಎಂಬ ಹಳ್ಳಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ಇತ್ತೀಚೆಗೆ ಈ ಸಿನಿಮಾದ ಶೂಟಿಂಗ್ ಸ್ಪಾಟ್ ಗೆ ಸುಲ್ತಾನ್ ಚಿತ್ರತಂಡದವರು ಶೂಟಿಂಗ್ ಗಾಗಿ ಆಗಮಿಸಿದ್ದರಂತೆ. ಆದ್ರೆ ಈಗಾಗಲೇ ಈ ಜಾಗವನ್ನು ಶೂಟಿಂಗ್ ದಾಂಗಲ್ ಸಿನಿಮಾ ತಂಡ ತೆಗೆದುಕೊಂಡಿದೆಯಂತೆ. ಅದರಂತೆ ಮುಂದಿನ ವರ್ಷ ಆಗಸ್ಟ್ ತಿಂಗಳವರೆಗೆ ಇಲ್ಲೇ ದಾಂಗಲ್ ಸಿನಿಮಾ ತಂಡ ಶೂಟಿಂಗ್ ನಡೆಸಲಿದೆ. ಹಾಗಾಗಿ ಸುಲ್ತಾನ್ ತಂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬಂದ್ರಂತೆ.
ಖ್ಯಾತ ಕುಸ್ತಿ ಪಟು ಮಹಾವೀರ್ ಪೋಗತ್ ಜೀವನಾಧರಿತ ಚಿತ್ರ ಇದಾಗಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲೂ ಜೊತೆಗೆ ಬಾಲಿವುಡ್ ಅಂಗಳದಲ್ಲೂ ಸಾಕಷ್ಟು ಕುತೂಹಲಗಳಿವೆ. ಈಗಾಗಲೇ ಫಸ್ಟ್ ಲುಕ್ ಮೂಲಕವೇ ಸಂಪ್ರೈಸ್ ನೀಡಿರುವ ಈ ಸಿನಿಮಾ ಮುಂದಿನ ದಿನಗಳಲ್ಲಿ ಇನ್ನ್ಯಾವ ರೀತಿ ಶಾಕ್ ನೀಡುತ್ತೋ ಕಾದು ನೋಡ್ಬೇಕು.