ಕಡತ ಚಿತ್ರ – File Photo
ಮಂಗಳೂರು, ಅ.2- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಅಕ್ರಮ ಚಿನ್ನ ಸಾಗಾಣಿಕೆಯನ್ನು ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡಿನ ಮಹಮ್ಮದ್ ಸುಲೇಮಾನ್ (44) ಎಂದು ಗುರುತಿಸಲಾಗಿದೆ.
ಈತ ನಿನ್ನೆ ಬೆಳಿಗ್ಗೆ ದುಬೈನಿಂದ ಜೆಟ್ ಏರ್ ವೇಸ್ ವಿಮಾನದ ಮೂಲಕ ಆಗಮಿಸಿದ್ದು, ತಪಾಸಣೆ ಸಂದರ್ಭ ಆತನ ಲಗೇಜ್ ನಲ್ಲಿ 1.380 ಕೆ.ಜಿ. ಅಕ್ರಮ ಚಿನ್ನ ಪತ್ತೆಯಾಗಿದೆ. 36.38 ಲ.ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
