ರಾಷ್ಟ್ರೀಯ

ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್: 42 ರೂಪಾಯಿ ಬೆಲೆ ಇಳಿಕೆ; ಎಟಿಎಫ್, ಸೀಮೆಎಣ್ಣೆ ಬೆಲೆ ಏರಿಕೆ

Pinterest LinkedIn Tumblr

gasಹೊಸದಿಲ್ಲಿ, ಅ.1: ಸಹಾಯಧನರಹಿತ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 42 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿದೆ.

ಬೆಲೆ ಇಳಿಕೆಯ ಹಿನ್ನೆಲೆಯಲ್ಲಿ 14.2 ಕೆಜಿ ತೂಕದ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್‌ಗೆ ದಿಲ್ಲಿಯಲ್ಲಿ 517.50 ರೂಪಾಯಿಗಳಾಗಲಿದೆ.

ಅದೇ ಹೊತ್ತಿಗೆ, ವಿಮಾನಯಾನ ಇಂಧನದ (ಎಟಿಎಫ್) ಬೆಲೆಯನ್ನು ಶೇ.5.5ರಷ್ಟು ಹಾಗೂ ಸಹಾಯಧನರಹಿತ ಸೀಮೆಎಣ್ಣೆ ಬೆಲೆಯನ್ನು ಪ್ರತಿ ಲೀಟರ್‌ಗೆ 54 ಪೈಸೆಯಷ್ಟು ಏರಿಕೆ ಮಾಡಲಾಗಿದೆ.

ದಿಲ್ಲಿಯಲ್ಲಿ ಎಟಿಎಫ್‌ನ ಬೆಲೆ ಪ್ರತಿ ಕಿಲೋ ಲೀಟರ್‌ಗೆ 2,245.92 ರೂಪಾಯಿಯಷ್ಟು ಏರಿಕೆಯಾಗಿದೆ (ಶೇ.5.48) ಎಂದು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಗುರುವಾರ ತಿಳಿಸಿವೆ.

ಸ್ಥಳೀಯ ಮಾರಾಟ ತೆರಿಗೆಗಳು ಇಲ್ಲವೇ ವೌಲ್ಯವರ್ಧಿತ ತೆರಿಗೆಯ ಕಾರಣದಿಂದ ಎಟಿಎಫ್‌ನ ಬೆಲೆಯಲ್ಲಿ ಬೇರೆಬೇರೆ ವಿಮಾನ ನಿಲ್ದಾಣಗಳಲ್ಲಿ ವ್ಯತ್ಯಾಸ ಇರಲಿದೆ.

ಪಡಿತರ ಧಾನ್ಯ ಅಂಗಡಿಗಳ ಹೊರಗೆ ಮಾರಾಟಕ್ಕೆ ಲಭ್ಯವಿರುವ ಸಬ್ಸಿಡಿರಹಿತ ಸೀಮೆಎಣ್ಣೆಯ ಬೆಲೆಯಲ್ಲಿ 42 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಲೀಟರ್ ಸೀಮೆಎಣ್ಣೆ ಬೆಲೆ 43.18 ರೂಪಾಯಿಗಳಾಗಿದೆ.

Write A Comment