ಕಾರ್ಕಳ,ಅ.01 : ಬೆಳ್ಮಣ್ ಚರ್ಚ್ ಬಳಿ ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮೂರು ಜನ ಮೃತ ಪಟ್ಟಿ ಘಟನೆ ಗುರುವಾರ ನಡೆದಿದೆ.
ಮೃತ ಪಟ್ಟವರನ್ನು ಪ್ರಕಾಶ್(28), ಪತ್ನಿ ಸುಮಿತ್ರಾ(23) ಮತ್ತು ಮಗಳು ಸೃಷ್ಠಿ(4) .ಎಂದು ಗುರುತಿಸಲಾಗಿದೆ .ಆಧಾರ್ ಕೇಂದ್ರಕ್ಕೆ ಪ್ರಕಾಶ್ ಪತ್ನಿ ಮತ್ತು ಮಗಳೊಂದಿಗೆ ತೆರಳುತ್ತಿದ್ದಾಗ ದಾವಣಗೆರೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಬೈಕಿಗೆ ಗುದ್ದಿದೆ ಎನ್ನಲಾಗಿದೆ.
ಪ್ರಕಾಶ್ ದಂಪತಿ ಮೂಲತ: ಗದಗದವರಾಗಿದ್ದು ಕಲ್ಲು ಕೋರೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ


