ಮನೋರಂಜನೆ

ಸಲ್ಮಾನ್ ಖಾನ್ ರ ಸುಲ್ತಾನ್ ಸಿನಿಮಾಗೆ ತರಬೇತಿ ಆರಂಭ

Pinterest LinkedIn Tumblr

sallaಭಜರಂಗಿ ಭಾಯಿಜಾನ್ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ಸಲ್ಮಾನ್ ಖಾನ್ ಇದೀಗ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುಲ್ತಾನ್ ಸಿನಿಮಾದಲ್ಲಿ ಸಲ್ಲು ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಈಗಾಗಲೇ ತರಬೇತಿ ಆರಂಭಗೊಂಡಿದೆ.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣವಾಗಿತ್ತಿರುವ ಈ ಸಿನಿಮಾ 2016 ರಲ್ಲಿ ತೆರೆಗೆ ಬರಲಿದೆ. ಸಲ್ಲು ವೃತ್ತಿ ಬದುಕಿನಲ್ಲಿ ಈ ಸಿನಿಮಾ ಅತ್ಯಂತ ಪ್ರಮುಖ ಸಿನಿಮಾವಾಗಿರಲಿದೆ ಎಂಬ ಮಾತುಗಳು ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಸಿನಿಮಾಕ್ಕಾಗಿ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ.

ಸಿನಿಮಾದಲ್ಲಿ ಸಲ್ಮಾನ್ ಖಾನ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಹಾಗಾಗಿ ಸಲ್ಮಾನ್ ತಮ್ಮ ಪಾತ್ರಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಈಗಾಗಲೇ ಸಲ್ಲು ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೋವಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇನ್ನು ಎರಡು ತಿಂಗಳುಗಳ ಕಾಲ ಸಲ್ಲು ಇವರಿಂದ ತರಬೇತಿ ಪಡೆಯಲಿದ್ದಾರೆ. ಅಂದ್ಹಾಗೆ ಸುಲ್ತಾನ್ ಸಿನಿಮಾವನ್ನು  ಗುಂಡೇ ಸಿನಿಮಾದ ನಿರ್ದೇಶಕ ಆಲಿ ಅಬ್ಬಾಸ್ಜಾಫರ್ ನಿರ್ದೇಶಿಸಲಿದ್ದಾರೆ.

Write A Comment