ಅಂತರಾಷ್ಟ್ರೀಯ

ಕಾರುಗಳ ಮರುಜೋಡಣೆಗೆ ಫೋಕ್ಸ್‌ವ್ಯಾಗನ್ ಯೋಜನೆ

Pinterest LinkedIn Tumblr

5Volkswagen_logo_2012ಫ್ರಾಂಕ್‌ಫರ್ಟ್, ಸೆ. 30: ತನ್ನ ಜಾಗತಿಕ ಮಾಲಿನ್ಯ ವಂಚನೆ ಹಗರಣದಿಂದ ಬಾಧಿತವಾಗಿರುವ ಕೋಟ್ಯಂತರ ಕಾರುಗಳನ್ನು ಪುನರ್ನಿರ್ಮಿಸುವ ಯೋಜನೆಯೊಂದನ್ನು ಫೋಕ್ಸ್‌ವ್ಯಾಗನ್ ಮಂಗಳವಾರ ಪ್ರಕಟಿಸಿದೆ.

ಯೋಜನೆಯನ್ನು ಪ್ರಕಟಿಸಿದ ಸಂಸ್ಥೆಯ ನೂತನ ಸಿಇಒ ಮಥಾಯಸ್ ಮುಲ್ಲರ್, ಬೃಹತ್ ಕಾರು ಕಂಪೆನಿಯ ಇತಿಹಾಸದಲ್ಲಿ ಎದುರಾಗಿರುವ ‘‘ಅತಿ ಕಠಿಣ ಪರೀಕ್ಷೆ’’ಯಲ್ಲಿ ತೇರ್ಗಡೆಯಾಗಲು ನಿರ್ದಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಹಗರಣವನ್ನು ಪರಿಹರಿಸುವ ವಿಧಾನಗಳ ಬಗ್ಗೆ ವಿವರಣೆ ನೀಡಲು ಜರ್ಮನಿ ಸರಕಾರ ಫೋಕ್ಸ್‌ವ್ಯಾಗನ್‌ಗೆ ಅಕ್ಟೋಬರ್ 7ರ ತನಕ ಕಾಲಾವಕಾಶ ನೀಡಿದೆ.

ಅಕ್ಟೋಬರ್‌ನಲ್ಲಿ ತಾಂತ್ರಿಕ ಪರಿಹಾರಗಳನ್ನು ಸಲ್ಲಿಸಲಾಗುವುದು ಎಂದು ಶುಕ್ರವಾರವಷ್ಟೇ ಕಂಪೆನಿಯ ಚುಕ್ಕಾಣಿ ಹಿಡಿದಿರುವ ಮುಲ್ಲರ್ ಹಿರಿಯ ಆಡಳಿತ ಮಂಡಳಿಗೆ ತಿಳಿಸಿದರು.

ಯೋಜನೆಗೆ ಜರ್ಮನಿ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡ ಬಳಿಕ, ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಹಾಗೂ ಕಾರುಗಳನ್ನು ಮರುಜೋಡಣೆ ಮಾಡಲಾಗುವುದು ಎಂದು ಕಂಪೆನಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

ಬಾಧಿತ ಕಾರುಗಳ ಮಾಲಕರಿಗೆ ‘‘ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ’’ ಸೂಚನೆ ನೀಡಲಾಗುವುದು ಎಂದಿದೆ.

ಸಂಬಂಧಿತ ಎಲ್ಲ ಬ್ರಾಂಡ್‌ಗಳು ಇಂಟರ್‌ನೆಟ್ ಪುಟಗಳನ್ನು ತೆರೆಯಲಿವೆ ಹಾಗೂ ಅದರಿಂದ ಗ್ರಾಹಕರಿಗೆ ಬೆಳವಣಿಗೆಗಳನ್ನು ತಿಳಿಯಲು ಸಹಾಯಕವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

Write A Comment