ಬೀಜಿಂಗ್: ದಕ್ಷಿಣ ಚೀನಾದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮ 6 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಚೀನಾದ ಜುವಾಂಗ್ ಝ ಗ್ರಾಮೀಣ ಪ್ರದೇಶದ 15 ಸ್ಥಳಗಳಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ನ್ಯೂಸ್ ಪೇಪರ್ ನಾನ್ ಗುವೋ ಮಾರ್ನಿಂಗ್ ನ್ಯೂಸ್ ವರದಿ ಮಾಡಿದೆ.
ಸರ್ಕಾರಿ ಕಚೇರಿ, ಶಾಪಿಂಗ್ ಸೆಂಟರ್ ಗಳು ಸ್ಫೋಟಕ್ಕೆ ತುತ್ತಾಗಿರುವುದಾಗಿ ವರದಿ ವಿವರಿಸಿದೆ. ಸುಮಾರು ಆರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ರಸ್ತೆಯಲ್ಲಿ ಗ್ಲಾಸ್, ಇಟ್ಟಿಗೆ, ಕಸ ತುಂಬಿಕೊಂಡಿರುವುದಾಗಿ ವರದಿ ಹೇಳಿದೆ. ಘಟನೆ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಬೇಕಾಗಿದೆ.