ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಹೇಗೆಂದರೆ, ಮಗಳು ಹುಟ್ಟಿದ ಸಂಭ್ರಮದಲ್ಲಿರುವ ವೀಣಾ ಮಲ್ಲಿಕ್ ಪತಿ ಅಸಾದ್ ಬಶೀರ್‌ಖಾನ್ ಟ್ವಿಟರ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
31 ವರ್ಷದ ವೀಣಾಗೆ ಒಂದು ವರ್ಷದ ಮಗನಿದ್ದು, ಇದೀಗ ವರ್ಜೀನಿಯಾದಲ್ಲಿ. ಪುತ್ರಿಗೆ ಜನ್ಮ ನೀಡಿರುವ ಸಿಹಿ ಸುದ್ದಿಯೊಂದಿಗೆ ನವಜಾತ ಶಿಶುವಿಗೆ ಅಮಾಲ್ ಅಸಾದ್ ಖಾನ್ ಎಂದು ಹೆಸರಿಟ್ಟು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ನಮ್ಮ ಜಗತ್ತಿಗೆ ಪುಟ್ಟ ರಾಜಕುಮಾರಿಗೆ ಸ್ವಾಗತ. ಹಜ್ ದಿನಗಳಲ್ಲಿ ಆಕೆಯ ಆಗಮನ ಸಂತಸ ತಂದಿದೆ ಎಂದಿದ್ದಾರೆ. ವೀಣಾ ಮಲ್ಲಿಕ್ ಅಸಾದ್ ಬಶೀರ್‌ಖಾನ್‌ನೊಂದಿಗೆ 2013ರ ಡಿ.25ರಂದು ವಿವಾಹವಾಗಿದ್ದರು.