ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಲಾಘವ ಮಾಡಿದ ನಂತರ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಅವರು ಕೈ ಒರೆಸಿಕೊಂಡಿದ್ದೇಕೆ? ಎಂಬುದು ಈಗ ಚರ್ಚಿತ ವಿಷಯವಾಗಿದೆ.
ಅಮೆರಿಕ ಭೇಟಿ ನೀಡಿದ ಮೋದಿಯವರಿಗೆ ಹಸ್ತಲಾಘವ ಮಾಡಿ ಬದಿಗೆ ಸರಿದ ನಡೆಲ್ಲಾ ಅವರು ಕೂಡಲೇ ಕೈ ಒರೆಸಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸತ್ಯ ನಡೆಲ್ಲಾ ಹೀಗೆ ಮಾಡುವ ಮೂಲಕ ಮೋದಿಯವರಿಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಹಸ್ತಲಾಘವ ಮಾಡಿದ ನಂತರ ಕೈ ಒರೆಸುವುದು ಅವರ ಅಭ್ಯಾಸವಾಗಿರಬಹುದು ಅದು ಎಂದು ಹೇಳುತ್ತಿದ್ದಾರೆ.
ಏನೇ ಆದರೂ ಒಬ್ಬರಿಗೆ ಆದರಪೂರ್ವಕವಾಗಿ ಹಸ್ತಲಾಘವ ಮಾಡಿದ ನಂತರ ಈಚೆ ಬಂದು ಕೈ ಒರೆಸಿಕೊಳ್ಳುವಂತದ್ದು ಏನಿತ್ತು? ಈ ಪ್ರಶ್ನೆಯೀಗ ಪ್ರಶ್ನೆಯಾಗಿಯೇ ಉಳಿದಿದೆ.
1 Comment
ಸ್ಕಿನ್ ಅಲರ್ಜಿ ಆಗಬಹುದೆಂಬ ಭಯದಿಂದ ಮುಂಜಾಗ್ರತಾ ಕ್ರಮವಾಗಿ ಹಾಗೆ ಮಾಡಿರಲೂಬಹುದು