ಕರ್ನಾಟಕ

ಬದನೆಕಾಯಿ ಎಣ್ಣೆಗಾಯಿ

Pinterest LinkedIn Tumblr

Badanekayi-Ennegayiಬೇಕಾಗುವ ಪದಾರ್ಥಗಳು

ಗುಂಡು ಬದನೆಕಾಯಿ – 10-15
ತೆಂಗಿನಕಾಯಿ – ಅರ್ಧ ಹೋಳು
ಚಕ್ಕೆ, ಲವಂಗ – ಸ್ವಲ್ಪ
ಗಸಗಸೆ – ಸ್ವಲ್ಪ
ಈರುಳ್ಳಿ – 2-3
ಬೆಳ್ಳುಳ್ಳಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಟೊಮೆಟೋ – 2
ಶುಂಠಿ – ಸ್ವಲ್ಪ
ದನಿಯಾ ಪುಡಿ – 1 ಚಮಚ
ಖಾರದ ಪುಡಿ – 2-3 ಚಮಚ
ಹರಳಣ್ಣೆ – ಸ್ವಲ್ಪ

ಮಾಡುವ ವಿಧಾನ

2 ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ನಂತರ ತೆಂಗಿನಕಾಯಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಗಸಗಸೆ, ಚಕ್ಕೆ, ಲವಂಗ, ಎಲ್ಲವನ್ನೂ ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ದನಿಯಾ ಪುಡಿ, ಖಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಂಡರೆ ಮಸಾಲೆ ತಯಾರಾಗುತ್ತದೆ.
ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಗುಂಡು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಬೇಕು.
ಮತ್ತೊಂದು ಪಾತ್ರೆ ತೆಗೆದುಕೊಂಡು ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ, ಅರಿಶಿಣದ ಪುಡಿ, ಉಪ್ಪು ಹಾಗೂ ಹರಳೆಣ್ಣೆ 2 ಚಮಚ ಹಾಕಿ ಮಿಶ್ರಣ ಮಾಡಬೇಕು.
ಈ ಮಸಾಲೆಯನ್ನು ಕತ್ತರಿಸಿಕೊಂಡ ಬದನೆಕಾಯಿಯೊಳಗೆ ತುಂಬಬೇಕು.
ನಂತರ ಒಂದು ಪಾತ್ರೆತೆಗೆದುಕೊಂಡು ಒಲೆಯ ಮೇಲಿಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ. ಇದು ಕೆಂಪಾಗಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
ನಂತರ ಇದಕ್ಕೆ ಮಸಾಲೆ ತುಂಬಿದ ಬದನೆಕಾಯಿ ಹಾಗೂ ಉಳಿದ ಮಸಾಲೆಯನ್ನು ಹಾಕಿ. ಬೇಯಲು ಮಸಾಲೆ ಹಾಗೂ ಬದನೆಕಾಯಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ಬೇಯಲು ಬಿಟ್ಟರೆ ಬದನೆಕಾಯಿ ಎಣ್ಣೆಗಾಯಿ ತಿನ್ನಲು ಸಿದ್ದವಾಗುತ್ತದೆ.

-ಮಂಜುಳ.ವಿ.ಎನ್

Write A Comment