ಮನೋರಂಜನೆ

ನಾನವಳಲ್ಲ, ಅವರು…! ಜಾಕ್ವೆಲಿನ್ ಕಿಕ್ಕರ್

Pinterest LinkedIn Tumblr

jak-fiಹಿಟ್ ಚಿತ್ರವೊಂದರ ಭಾಗವಾಗಿದ್ದರೆ ಸಾಕು, ಅವರಿಗೆ ಆಯಾ ಚಿತ್ರದ ನಾಮಧೇಯ ವಿಶೇಷಣವಾಗಿ ಅಂಟಿಕೊಳ್ಳುತ್ತದೆ. ಈ ಕೋನದಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಯಾವಾಗಲೂ ‘ಕಿಕ್ ಬೆಡಗಿ’ಯೇ! 30ರ ಹರೆಯದ ಈ ಶ್ರೀಲಂಕಾ ಮೂಲದ ನಟಿ, ತನಗೆ ಪೆಟ್ಟಾಗಿದ್ದರೂ ಅದನ್ನು ತೋರಗೊಡದೇ ‘ದೊಡ್ಡತನ’ ಪ್ರದರ್ಶಿಸುತ್ತಿದ್ದಾರೆ. ವಾಸ್ತವವಾಗಿ ಹಿನ್ನಡೆ ಅನುಭವಿಸಿದ್ದರೂ ಅದರ ಬಗ್ಗೆ ಮಾಧ್ಯಮಗಳಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ಬರದಂತೆ ಮಾಡುವ ಜಾಣತನವದು!!

ಸಲ್ಮಾನ್ ಖಾನ್ ನಾಯಕತ್ವದ ‘ಕಿಕ್’ ಕ್ಲಿಕ್ ಆಗುತ್ತಲೇ ‘ಕಿಕ್ 2’ ಬಗೆಗಿನ ಮಾತುಗಳು ಕೇಳಿಬಂದಿದ್ದವು. ಇದೀಗ ‘ಪ್ರೇಮ್ ರತನ್ ಧನ್ ಪಾಯೋ’ ದೀಪಾವಳಿ ಧಮಾಕಾ ಎಬ್ಬಿಸೋಕೆ ಅಣಿಯಾಗಿರುವಾಗಲೇ ಸಲ್ಲೂ ಮುಂದಿನ ಪ್ರಾಜೆಕ್ಟ್ ಬಗ್ಗೆ ಸದ್ದು ಕೇಳಿಬರತೊಡಗಿದೆ. ಆದರೆ, ಆ ಸದ್ದು ನಾಯಕಿಯ ವಿಚಾರದಲ್ಲಿ ಅನ್ನುವುದು ಕುತೂಹಲಕರ. ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ, ಜಾಕ್ವೆಲಿನ್ ಮತ್ತೊಮ್ಮೆ ಯಶಸ್ಸಿನ ಕಿಕ್ ಕೊಡಬಹುದಿತ್ತು. ದುರದೃಷ್ಟವಶಾತ್ ಅಂಥ ಅವಕಾಶದಿಂದ ವಂಚಿತರಾಗಿದ್ದಾರೆ! ಹಾಗೆಂದು ‘ಕಿಕ್ 2’ ಬಗ್ಗೆ ಕಾಮೆಂಟ್ ಮಾಡಿ ಹೆಡ್​ಲೈನ್​ನಲ್ಲಿರುವುದನ್ನು ಮಾತ್ರ ಜಾಕ್ವೆಲಿನ್ ಬಿಡುತ್ತಿಲ್ಲ.

‘ಕಿಕ್ 2’ನಲ್ಲಿ ತಾವಿಲ್ಲದಿದ್ದರೆ ಏನಾಯಿತು, ಆ ಆಕ್ಷನ್ ಸಿನಿಮಾಗೆ ಇನ್ನ್ಯಾರು ಬಣ್ಣಹಚ್ಚಿದರೆ ಚೆಂದ ಎನ್ನುವ ಬಗ್ಗೆ ಜಾಕ್ವೆಲಿನ್ ಉಚಿತ ಸಲಹೆಗಳನ್ನು ರವಾನಿಸಿದ್ದಾರೆ. ಅವರ ಪಟ್ಟಿಯಲ್ಲಿರುವ ಮೂವರು; ಸೋನಾಕ್ಷಿ ಸಿನ್ಹ, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ. ‘ಕಿಕ್ 2- ನಾಯಕಿಯರ ಬಗ್ಗೆ ಯೋಚಿಸಿದಾಗ ನನಗೆ ಈ ಮೂವರೇ ಕಾಣಿಸುತ್ತಾರೆ. ಆದರೆ ಅಂತಿಮ ಆಯ್ಕೆ ಏನಿದ್ದರೂ ಸಲ್ಮಾನ್ ಅವರೇ ಮಾಡಬೇಕು’ ಎಂದಿದ್ದಾರೆ ಜಾಕ್ವೆಲಿನ್!

ಅಸಲಿಗೆ, ಚಿತ್ರವೊಂದಕ್ಕೆ ನಾಯಕಿ ಯಾರಾಗಬೇಕು ಎಂಬುದು ನಿರ್ದೇಶಕನ ತೀರ್ವನ, ನಿರ್ವಪಕ ಅನುಮೋದನೆಯೂ ಅದಕ್ಕೆ ಅಗತ್ಯ. ಆದರೆ ಈ ಬಗ್ಗೆ ಸಾಜಿದ್ ನಾಡಿಡ್ವಾಲಾ ತುಟಿಪಿಟಕ್ ಅಂದಿಲ್ಲ. ಸಲ್ಲೂ ಕೂಡ ಬಾಯಿ ಬಿಟ್ಟಿಲ್ಲ. ಅಷ್ಟರಲ್ಲಾಗಲೇ ಜಾಕ್ವೆಲಿನ್ ಗಾ‘ಸಿಪ್’ ಎಳೆಯುವವರಿಗೆ ಆಹಾರವಾಗಿದ್ದಾರೆ…

Write A Comment