ಮನೋರಂಜನೆ

ಕನ್ನಡದ “ಕೇರಾಫ್ ಫ‌ುಟ್‌ಪಾತ್‌ -2′ ಆಸ್ಕರ್ ಪ್ರಶಸ್ತಿಗೆ ನೇರ ಸ್ಪರ್ಧೆ

Pinterest LinkedIn Tumblr

Kishan1ಬೆಂಗಳೂರು: ಕಿಶನ್‌ ನಿರ್ದೇಶನದ “ಕೇರಾಫ್ ಫ‌ುಟ್‌ಪಾತ್‌ -2′ ಚಿತ್ರ ಪ್ರತಿಷ್ಠಿತ ಆಸ್ಕರ್‌ಗೆ ಎಂಟ್ರಿ ಪಡೆದುಕೊಂಡಿದೆ. ಅಲ್ಲಿಗೆ ಕನ್ನಡದ ಚಿತ್ರವೊಂದು ಆಸ್ಕರ್‌ಗೆ ಎಂಟ್ರಿ ಪಡೆದುಕೊಂಡಂತಾಗಿದೆ.

ಬಾಲಪರಾಧಿಗಳ ಕುರಿತಾಗಿ ಕಿಶನ್‌ ಈ ಚಿತ್ರವನ್ನು ಮಾಡಿದ್ದು, ಆಸ್ಕರ್‌ನ ಜನರಲ್‌ ಲೆಟರಲ್‌ ಕೆಟಗರಿಯಡಿ “ಕೇರಾಫ್ ಫ‌ುಟ್‌ಪಾತ್‌ -2′ ಗೆ ಎಂಟ್ರಿ ಸಿಕ್ಕಿದೆ. ಚಿತ್ರ ಅಕ್ಟೋಬರ್‌ನಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಬಿಡುಗಡೆಯಾಗಲಿದೆ. ಆ ನಂತರ ಆಸ್ಕರ್‌ನ ಸದಸ್ಯರಿಗೆ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ. ಅಲ್ಲಿ ನಡೆಯುವ ವೋಟಿಂಗ್‌ ಮೇರೆಗೆ ಚಿತ್ರದ ಮುಂದಿನ ಆಯ್ಕೆಗಳು ನಡೆಯಲಿವೆ.

“ತುಂಬಾ ಖುಷಿಯಾಗುತ್ತಿದೆ. ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆಸ್ಕರ್‌ಗೆ ಎಂಟ್ರಿಕೊಡುತ್ತಿದೆ. ಅಕ್ಟೋಬರ್‌ನಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಕಿಶನ್‌.
-ಉದಯವಾಣಿ

Write A Comment