ಮನೋರಂಜನೆ

ಸನ್ನಿ ಸಿನ್ಮಾ; ಡೈರೆಕ್ಟರ್ ವಿರುದ್ಧ ಸನ್ನಿ ಪತಿ ಗರಂ ಆಗಿದ್ದೇಕೆ?

Pinterest LinkedIn Tumblr

Sunny-Leone-Angry-500ಮುಂಬಯಿ: ಪ್ರಖ್ಯಾತ ಸಿನೇಮಾ ತಾರೆಯರ ಜನಪ್ರಿಯತೆಯನ್ನು ಬಂಡವಾಳವಾಗಿರಿಸಿಕೊಂಡು ಅವರ ಜೀವನದ ರೋಚಕ ಕಥೆಯನ್ನು ಆಧರಿಸಿ ಸಿನೇಮಾ ಮಾಡುವ ಖಯಾಲಿ ಹೊಂದಿರುವ ಬಾಲಿವುಡ್‌ ಚಿತ್ರ ನಿರ್ಮಾಪಕ ಕಾಂತಿ ಶಾ ಇದೀಗ ಸನ್ನಿ ಲಿಯೋನ್‌ ಕುರಿತಾಗಿ ಒಂದು ಸಿನೆಮಾ ಮಾಡಲು ಹೊರಟಿದ್ದಾರೆ. ಅವರ ಈ ಹೊಸ ಚಿತ್ರದ ಹೆಸರು “ಮೈ ಸನ್ನಿ ಲಿಯೋನ್‌ ಬನ್‌ನಾ ಚಾಹತೀ ಹೂಂ’.

ಕಾಂತಿ ಶಾ ಅವರ ಈ ಹೊಸ ಸಿನೆಮಾ ಯೋಜನೆಯು ಸನ್ನಿ ಲಿಯೋನ್‌ ಮತ್ತು ಆಕೆಯ ಪತಿ ಡೇನಿಯಲ್‌ ಅವರನ್ನು ಬಹುವಾಗಿ ಸಿಟ್ಟಿಗೆಬ್ಬಿಸಿದೆ. ಹಿಂದೆ ಬ್ಲೂ ಫಿಲಂ ನಟಿಯಾಗಿ ವಿಶ್ವ ಪ್ರಸಿದ್ಧಿ ಪಡೆದಿದ್ದ ಸನ್ನಿ ಲಿಯೋನ್‌, ಮುಂಬಯಿ ಬಾಲಿವುಡ್‌ಗೆ ಕಾಲಿಟ್ಟು ಮಹೇಶ್‌ ಭಟ್‌ ಅವರ ಚಿತ್ರದಲ್ಲಿ ನಟಿಸುವ ಹೊಸ ಇಮೇಜ್‌ ಪಡೆದು ಇದೀಗ ಯಶಸ್ಸಿನ ಉತ್ತುಂಗ ಶಿಖರವೇರುತ್ತಿರುವುದು ಎಲ್ಲರ ಕಣ್ಣು ಕುಕ್ಕುವಂತಿದೆ.

ಸನ್ನಿ ಲಿಯೋನ್‌ನ ಜನಪ್ರಿಯತೆ, ಹೊಸ ಇಮೇಜ್‌, ಆಕೆಯ ಬ್ಲೂ ಫಿಲಂ ಬದುಕು ಮುಂತಾದ ತಿರುವುಗಳನ್ನು ಆಧರಿಸಿ ಕಥಾವಸ್ತು ರೂಪಿಸಿರುವ ನಿರ್ಮಾಪಕ ಕಾಂತಿ ಶಾ, “ಮೈ ಸನ್ನಿ ಲಿಯೋನ್‌ ಬನ್‌ನಾ ಚಾಹತೀ ಹೂಂ’ ಎಂಬ ಶೀರ್ಷಿಕೆಯ ಚಿತ್ರ ತೆಗೆಯಲು ಹೊರಟಿದ್ದು ಇದು ನೇರವಾಗಿ ಸನ್ನಿ ಲಿಯೋನ್‌ ಬದುಕು ಆಧರಿಸಿದ ಚಿತ್ರವೆಂಬುದಕ್ಕೆ ನೇರ ಸಾಕ್ಷಿಯಾಗಿದೆ. ಹಾಗಾಗಿಯೇ ಸನ್ನಿ ಮತ್ತು ಆಕೆಯ ಪತಿ ಡೇನಿಯಲ್‌, ಕಾಂತಿ ಶಾ ವಿರುದ್ಧ ದಾವೆ ಹೂಡಲು ಮುಂದಾಗಿದ್ದಾರೆ.

ಕಾಂತಿ ಶಾ ಅವರ ಈ ಪ್ರಸ್ತಾವಿತ ಚಿತ್ರದಲ್ಲಿ ನಾಯಕಿಯು ಅಕ್ಷತ ಕನ್ಯೆಯಾಗಿದ್ದು ಸಿನೆಮಾ ರಂಗದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಪ್ರಯತ್ನಿಸಿ ಸೋತು ಬ್ಲೂ ಫಿಲಂ ತಾರೆಯಾಗಿ ವಿಶ್ವ ಪ್ರಸಿದ್ಧಿ ಪಡೆಯುತ್ತಾಳೆ. ಆ ಬಳಿಕ ಮತ್ತೆ ಚಿತ್ರರಂಗಕ್ಕೆ ಬರುವ ಆಕೆ ಕಷ್ಟಪಟ್ಟು ಹೊಸ ಇಮೇಜ್‌ ಪಡೆದು ಯಶಸ್ವೀ ತಾರೆಯಾಗುತ್ತಾಳೆ ! ಇದು ಸನ್ನಿ ಲಿಯೋನ್‌ ಬದುಕಿನ ನೇರ ಕಥೆಯೇ ಆಗಿದೆ ಎಂಬುದು ಯಾರಿಗೂ ಗೊತ್ತಾಗುವಂತಿದೆ.

ಸನ್ನಿ ಲಿಯೋನ್‌ ಪ್ರಕೃತ ಕರಣ್‌ ಜೋಹರ್‌ ನಿರ್ದೇಶನದ ” ಯೇ ದಿಲ್‌ ಹೈ ಮುಷ್ಕಿಲ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ಜತೆಗೆ ನಟಿಸುತ್ತಿದ್ದಾಳೆ.

-ಉದಯವಾಣಿ

Write A Comment