ಉಡುಪಿ: ವಿವಾಹಿತ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಉಡುಪಿಯ ಒಳಕಾಡು ನಿವಾಸಿಗಳಾದ ಡಾ.ನಜ್ಮಾ ಬಾನು ಇಸ್ಮಾಯಿಲ್ ಮತ್ತು ಅವರ ಎರಡು ಮಕ್ಕಳಾದ ಆಯಿಷ್ ಎಂ ಡೆಲ್‌ವಿ (10), ಅಮಿರ್ ಅಜ್ಚಮತ್ ಡೆಲ್‌ವಿ (3) ಎನ್ನುವವರೇ ಕಾಣೆಯಾದವರಾಗಿದ್ದಾರೆ. ಸೆ. 22 ರಂದು 11:30ಕ್ಕೆ ಅವರ ನಿವಾಸದಿಂದ ಕಾಣೆಯಾದ ಇವರು ಈವರೆಗೂ ಪತ್ತೆಯಾಗಿಲ್ಲ, ಕೂತುಂಬಿಕರು ಸತತ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವೂ ಆಗಿಲ್ಲ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
