ಅಂತರಾಷ್ಟ್ರೀಯ

ಶನಿ ಉಪಗ್ರಹದಲ್ಲಿ ಸಾಗರ!

Pinterest LinkedIn Tumblr

3saturna-1ವಾಷಿಂಗ್ಟನ್, ಸೆ.16: ಶನಿಗ್ರಹದ ಚಂದ್ರ ‘ಎನ್‌ಸೆಲಾಡಸ್’ನ ಹಿಮಗಡ್ಡೆಗಳ ಕೆಳಗೆ ನೀರಿನ ಬೃಹತ್ ಸಾಗರವೊಂದು ಪತ್ತೆಯಾಗಿರುವುದಾಗಿ ನಾಸಾ ವಿಜ್ಞಾನಿಗಳ ಹೊಸ ಸಂಶೋಧನೆ ಬಹಿರಂಗಪಡಿಸಿದೆ.
ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಈ ಉಪಗ್ರಹದಲ್ಲಿ ಹಿಮಪದರವಿರುವುದನ್ನು ಬಹಳ ಹಿಂದೆಯೇ ಪತ್ತೆಹಚ್ಚಿತ್ತು.
ಶನಿಗ್ರಹದ ಉಪಗ್ರಹ ‘ಎನ್‌ಸೆಲಾಡಸ್’ನಲ್ಲಿ ಇರುವ ನೀರಿನ ಮೇಲ್ಮೈ ಮಾತ್ರವೇ ಘನರೂಪದಲ್ಲಿದೆ. ಆದರೆ ಒಳಭಾಗದಲ್ಲಿ ನೀರಿನ ಬೃಹತ್ ಸರೋವರ, ಅಂದರೆ ‘ಜಾಗತಿಕ’ ಸಾಗರವೇ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಸಿನಿ ಒದಗಿಸಿದ್ದ ಮಾಹಿತಿಯನ್ನು ಈ ಮೊದಲು ಅಧ್ಯಯನ ನಡೆಸಿದ ಬಳಿಕ ಉಪಗ್ರಹದ ದಕ್ಷಿಣ ಧ್ರುವ ಪ್ರದೇಶದಲ್ಲಿ ಪ್ರಮಾಣದ ಸಮುದ್ರ ಪ್ರಮಾಣದ ನೀರು ಇರುವ ಸಾಧ್ಯತೆಯಿರುವುದಾಗಿ ತಿಳಿಸಲಾಗಿತ್ತು. ಆದರೆ ಕ್ಯಾಸಿನಿ ವ್ಯೋಮನೌಕೆಯು ಉಪಗ್ರಹದ ದಕ್ಷಿಣ ಧ್ರುವ ಪ್ರದೇಶದ ಮೂಲಕ ಹಾದುಹೋಗುವಾಗಲೆಲ್ಲ ಸಂಗ್ರಹಿಸಲಾದ ಗುರುತ್ವಾಕರ್ಷಣ ಮಾಹಿತಿಯು ಈ ಉಪಗ್ರಹದಲ್ಲಿ ಇರಬಹುದಾದ ನೀರು ಸಮುದ್ರ ಪ್ರಮಾಣದ್ದಾಗಿರದೆ ಜಾಗತಿಕ ಸಾಗರ ಮಟ್ಟದಲ್ಲಿರಬಹುದೆಂಬ ಸುಳಿವು ನೀಡಿದೆ. ಆದರೆ ಈ ಬಗ್ಗೆ ಖಚಿತವಾಗಿ ಹೇಳಲು ಹಲವು ವರ್ಷಗಳ ಅಧ್ಯಯನ ಬೇಕಾಯಿತು ಎಂದು ಕ್ಯಾಸಿನಿ ಕಳುಹಿಸಿರುವ ಚಿತ್ರಗಳ ವಿಶ್ಲೇಷಣೆ ನಡೆಸಿರುವ ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾನಿಲಯದ ಸಂಶೋಧಕ ಪೀಟರ್ ಥಾಮಸ್ ಹೇಳಿದ್ದಾರೆ.
ಕ್ಯಾಸಿನಿಯು ಅಕ್ಟೋಬರ್ 28ರಂದು ಹಿಮಗಡ್ಡೆ ಇರುವ ಪ್ರದೇಶದ ಮೇಲೆ ಮತ್ತೊಮ್ಮೆ ಪ್ರದಕ್ಷಿಣೆ ಬರಲಿದೆ. ಈ ಬಾರಿ ಅದು ಹಿಮಗಡ್ಡೆ ಇರುವ ಪ್ರದೇಶದಲ್ಲಿ ಕೇವಲ 49 ಕಿ.ಮೀ. ಎತ್ತರದಿಂದ ಹಾದುಹೋಗಲಿದೆ.
2004ರ ಮಧ್ಯಾವಧಿಯಿಂದ ಇದುವರೆಗೆ ಸುಮಾರು 10 ವರ್ಷಗಳ ಅವಧಿಯಲ್ಲಿ ಕ್ಯಾಸಿನಿಯು ಕಳುಹಿಸಿದ ‘ಎನ್‌ಸೆಲಡಾಸ್’ ಉಪಗ್ರಹದ ಹಲವಾರು ಚಿತ್ರಗಳ ವಿಶ್ಲೇಷಣೆಯನ್ನು ಈ ತಂಡ ನಡೆಸಿದೆ.

Write A Comment