ರಾಷ್ಟ್ರೀಯ

ಕೊಲ್ಲುವ ಗಂಡನನ್ನು ಯಾರಾದರೂ ಸ್ವೀಟ್ ಹಾರ್ಟ್ ಎಂದು ಕರೆಯುತ್ತಾರಾ? ಸೋಮನಾಥ್ ಭಾರ್ತಿ

Pinterest LinkedIn Tumblr

soma-newನವದೆಹಲಿ: ಕೌಟಂಬಿಕ ದೌರ್ಜನ್ಯ ಪ್ರಕರಣ ಕುರಿತಂತೆ ತಮ್ಮ ಪತ್ನಿ ಲಿಪಿಕಾ ಮಿತ್ರಾ ದಾಖಲಿಸಿದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಹೇಳಿದ್ದಾರೆ . ಆಕೆ ಸದಾ ನನ್ನನ್ನು ಸ್ವಿಟ್ ಹಾರ್ಟ್ ಎಂದು ಕರೆಯುತ್ತಿದ್ದಳು ಎನ್ನುವುದಕ್ಕೆ ನನ್ನ ಬಳಿ ಆಡಿಯೋ, ವಿಡಿಯೋ ಸಾಕ್ಷಿಯಿದ್ದು ಸತ್ಯವನ್ನು ಬಹಿರಂಗಪಡಿಸುತ್ತೇನೆ  ಎಂದು ಹೇಳಿದ್ದಾರೆ.

ಪತಿ ಭಾರ್ತಿ ತಮ್ಮ ಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿಕೆ ನೀಡುವ ಲಿಪಿಕಾ ಮತ್ತೊಂದೆಡೆ ಸ್ವಿಟ್ ಹಾರ್ಟ್ ಮನೆಗೆ ಯಾವಾಗ ಬರುತ್ತೀರಾ? ನಾನು ನಿಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೊಬೈಲ್ ಸಂದೇಶವನ್ನು ಫೆಬ್ರವರಿ 25 ರಂದು ನನಗೆ ಕಳುಹಿಸಿದ್ದಾಳೆ. ಪ್ರತಿನಿತ್ಯ ಹಿಂಸೆ ನೀಡಿ ಕೊಲ್ಲಲು ಯತ್ನಿಸಿದ ಪತಿಗೆ ಯಾವ ಪತ್ನಿ ತಾನೇ ಇಂತಹ ಮೇಸೇಜ್ ಕಳುಹಿಸುತ್ತಾಳೆ ಎಂದು ಪ್ರಶ್ನಿಸಿದ್ದಾರೆ.

ಲಿಪಿಕಾ ಮಿತ್ರಾ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎನ್ನುವುದಕ್ಕೆ ನನ್ನ ಬಳಿ ಹಲವಾರು ಸಾಕ್ಷಿಗಳಿವೆ. ಇದರ ಹಿಂದೆ ಬೇರೆಯವರ ಒತ್ತಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.

Write A Comment