ಕನ್ನಡ ವಾರ್ತೆಗಳು

ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಶ್ರೀ ಗಣೇಶೋತ್ಸವ : ಬಂಟ್ಸ್‌ಹಾಸ್ಟೆಲ್‌ನ ಓಂಕಾರ ನಗರಕ್ಕೆ ಅದ್ದೂರಿ ಮೆರವಣಿಗೆಯಲ್ಲಿ ಬಂದ ಶ್ರೀ ಗಣೇಶ

Pinterest LinkedIn Tumblr

Bunts_Ganesha_Arrive_1

ಮಂಗಳೂರು, ಸೆ.16 :  ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಸಾರ್ವಜಕ ಶ್ರೀ ಗಣೇಶೋತ್ಸವ ಸಮಿತಿಯು 12ನೇ ವರ್ಷದ ಶ್ರೀ ಗಣೇಶೋತ್ಸವ ಸಪ್ಟೆಂಬರ್ 17ರಿಂದ 19ರ ವರೆಗೆ ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ನಡೆಯಲಿದ್ದು, ಈ ಪ್ರಯುಕ್ತ ಇಂದು ( ಬುಧವಾರ) ಸಂಜೆ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ರಾಧಾಕೃಷ್ಣ ಮಂದಿರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ಶ್ರೀ ಮಾಲಾಡಿ ಅಜಿತ್‌ಕುಮಾರ್ ರೈ ಅವರ ನೇತ್ರತ್ವದಲ್ಲಿ ಮೆರವಣಿಗೆಯ ಮೂಲಕ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ‘ಓಂಕಾರನಗರ’ಕ್ಕೆ ತರಲಾಯಿತು.

ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ಹಾಗೂ ಇತರ ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಜಾತಿ ಮತ ಬಾಂಧವರ ಸಹಕಾರದಿಂದ, ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ಕಳೆದ 11 ವರ್ಷಗಳಿಂದ ಅಚರಿಸುತ್ತಾ ಬಂದಿದೆ.

Bunts_Ganesha_Arrive_2

ನಾಳೆ ಬೆಳಿಗ್ಗೆ ೯.೧೫ಕ್ಕೆ ಧ್ವಜಾರೋಹಣ, ೯.೩೦ಕ್ಕೆ ಉದ್ಘಾಟನೆ, ೯.೪೦ಕ್ಕೆ ತೆನೆಹಬ್ಬ-ತೆನೆ ವಿತರಣೆ, ೯.೪೫ಕ್ಕೆ ಶ್ರೀ ದೇವರ ಮೂರ್ತಿ ಪ್ರತಿಷ್ಠೆ, ೧೦.೩೦ರಿಂದ ಭಜನಾ ಸೇವೆ, ಮಧಾಹ್ನ ೧೨.೦೦ ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.

ದಿನಾಂಕ ೧೯.೦೯.೨೦೧೫ನೇ ಶವಾರ ಬೆಳಿಗ್ಗೆ ೮.೦೦ ಕ್ಕೆ ಪ್ರಾತಃಕಾಲದ ಪೂಜೆಯಾಗಿ ೮.೩೦ಕ್ಕೆ ಅಷ್ತೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭವಾಗಿ ೧೧.೦೦ ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಪ್ರಸಾದ ವಿತರಣೆ, ೧೨.೩೦ಕ್ಕೆ “ಮಹಾ ಅನ್ನಸಂತರ್ಪಣೆ” ಜರಗಲಿರುವುದು. ಮಧ್ಯಾಹ್ನ ೩.೩೦ ಗಂಟೆಗೆ ವಿಸರ್ಜನಾ ಪೂಜೆ ನಡೆದು ದೀಪ ಪ್ರಜ್ವಲನದೊಂದಿಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಜನಾ ಸೇವಾ ಕಾರ್ಯಕ್ರಮದ ಉದ್ಘಾಟನೆಯು ಜರಗಲಿರುವುದು. ಮಧ್ಯಾಹ್ನ ೩.೩೦ ಕ್ಕೆ ಶೊಭಾಯಾತ್ರೆಯು ಪ್ರಾರಂಭವಾಗಿ ಶ್ರೀ ಮಹಾಮ್ಮಾಯಿ ಕೆರೆಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.

ದಿನಾಂಕ ೧೭ರಿಂದ ೧೯ರವರೆಗೆ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ವತಿಯಿಂದ ‘ಓಂಕಾರನಗರ’ದ ವೇದಿಕೆಯಲ್ಲಿ ಶ್ರೀ ಗಣೇಶೋತ್ಸವ ದಶಮ ಸಂಭ್ರಮದ ಅಂಗವಾಗಿ ಪ್ರತಿಭಾನ್ವೇಷಣೆ ಸಮಿತಿಯಿಂದ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.

ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ.ಆಶಾ ಜ್ಯೋತಿ ರೈ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜಕ ಶ್ರೀಗಣೇಶೋತ್ಸವ ಸಮಿತಿಯ ಟ್ರಸ್ಟಿಗಳು ಮತ್ತು ಪದಾದಾಧಿಕಾರಿಗಳಾದ ಶ್ರೀ ಮಂಜುನಾಥ ಭಂಡಾರಿ ಶೆಡ್ಯೆ. ಶ್ರೀ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಶ್ರೀ ಕೃಷ್ಣಪ್ರಸಾದ್ ರೈ ಬೆಳ್ಳಿಪ್ಪಾಡಿ, ಶ್ರೀ ಕೆ. ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟು ಗುತ್ತು, ಸಿ‌ಎ. ಶಾಂತಾರಾಮ ಶೆಟ್ಟಿ, ಶ್ರೀ ದಿವಾಕರ ಸಾಮಾನಿ ಚೇಳಾರುಗುತ್ತು, ಶ್ರೀ ಕೃಷ್ಣರಾಜ ಸುಲಾಯ ಅಡ್ಯಾರ್‌ಗುತ್ತು, ಶ್ರೀ ಬಿ.ಶೇಖರ್ ಶೆಟ್ಟಿ, ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ,ಶ್ರೀಮತಿ ಪ್ರತಿಮಾ ಆರ್.ಶೆಟ್ಟಿ, ಶ್ರೀಮತಿ ಮೀನಾ ಆರ್.ಶೆಟ್ಟಿ,ಶ್ರೀ ಮನೀಷ್ ರೈ, ಶ್ರೀ ಅಶ್ವತ್ಥಾಮ ಹೆಗ್ಡೆ, ಶ್ರೀ ಜಗದೀಶ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Write A Comment