ದುಬೈ : ಧಾರ್ಮಿಕ , ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅರಬ್ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಅಧೀನದಲ್ಲಿ ಡಿಸೆಂಬರ್ 11 ರಂದು ಯು ಎ ಇ ರಾಷ್ಟ್ರೀಯ ದಿನಾಚರಣೆ ಹಾಗೂ ತನ್ನ 15 ವರ್ಷಗಳ ಯಶಸ್ವೀ ಹೆಜ್ಜೆಯ ನೆನಪಿಗಾಗಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಪ್ರಯುಕ್ತ ಸ್ವಾಗತ ಸಮಿತಿ ಯನ್ನು ರಚಿಸಲಾಯಿತು.
ಕೆ ಐ ಸಿ ಕೇಂದ್ರ ಸಮಿತಿ ಅಧೀನದಲ್ಲಿ ರಚನೆ ಗೊಂಡ ಸ್ವಾಗತ ಸಮಿತಿಯ ಚೈರ್ಮಾನ್ ಶರೀಫ್ ಕಾವು ರವರು ಕಾರ್ಯಕ್ರಮದ ಬಗ್ಗೆ ವಿವರಿಸಿ , ಸುಮಾರು ಒಂದು ಸಾವಿರ ಕ್ಕಿಂತಲೂ ಮಿಕ್ಕಿ ಅನಿವಾಸಿ ಕೆ ಐ ಸಿ ಹಿತೈಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಯಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ತಾಯಿನಾಡಿನಿಂದ ಕೆ ಐ ಸಿ ಗೌರವ ಸಲಹೆಗಾರರು , ಕೇರಳ ಹಾಗೂ ಕರ್ನಾಟಕ ರಾಜ್ಯದ ಸುಪ್ರಸಿದ್ದ ಕುಂಬೋಲ್ ಮನೆತನದ ಅಸಯ್ಯದ್ ಅಲಿ ತಂಙಲ್ ಕುಂಬೋಲ್ , ಕರ್ನಾಟಕ ರಾಜ್ಯದ ಪ್ರಸಿದ್ದ ವಿದ್ವಾಂಸ ಮಿತ್ತಬೈಲ್ ಉಸ್ತಾದ್ ಎಂದೇ ಪರಿಚಿತರಾದ ಶೈಖುನ ಜಬ್ಬಾರ್ ಉಸ್ತಾದ್ ಮಿತ್ತಬೈಲ್ , ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಅಹಮ್ಮದ್ ಹಾಜಿ ಆಕರ್ಷಣ್ , ಅಕಾಡೆಮಿ ಸಂಘಟನ ಕಾರ್ಯದರ್ಶಿ ಕೆ ಐ ಸಿ ಶಿಲ್ಪಿ ಎಂದೇ ಕರೆಯಲ್ಪಡುವ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ , ಅಕಾಡೆಮಿ ಇತರ ಪಧಾಧಿಕಾರಿಗಳು , ಪ್ರಸಿದ್ದ ಉಧ್ಯಮಿಗಳು , ಸಾಮಾಜಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಗೈದ ಉಲಮಾ ಉಮರಾ ನೇತಾರರು , ಹಾಗೂ ಯು ಎ ಇ ಸ್ವದೇಶೀ ಪ್ರಮುಖರು , ಅರಬ್ ರಾಷ್ಟ್ರಗಳ ವಿವಿದ ಕ್ಷೇತ್ರಗಳ ಗಣ್ಯರು , ಉಧ್ಯಮಿಗಳು , ಕೆ ಐ ಸಿ ಹಿತೈಷಿ ಪ್ರೋತ್ಸಾಹಕರು ಭಾಗವಹಿಸಲಿದ್ದು ಆ ಪ್ರಯುಕ್ತ ಯು ಎ ಇಯ ಎಲ್ಲ ಎಮಿರೇಟ್ಸ್ ಗಳಲ್ಲಿ ಪ್ರಚಾರ ಆಂದೋಲನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಪಧಾಧಿಕಾರಿಗಳ ಸಹಕಾರವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಆಸ್ಕರ್ ಅಲಿ ತಂಙಲ್ ಕೊಲ್ಪೆ ರವರು ಮಾತನಾಡಿ ಸಂಸ್ಥೆಯ ಅಧೀನದಲ್ಲಿ ಕಾರ್ಯಚರಿಸುತ್ತಾ ಬರುತ್ತಿರುವ ವಿಧ್ಯಾ ಸಂಸ್ಥೆಯ ಪ್ರಸಿದ್ದತೆಯನ್ನು ಪ್ರಶಂಸಿ, ಕೆ ಐ ಸಿ ಎಂಬ ಈ ಬೃಹತ್ ಸಂಘಟನೆಯು ಇಂದು ತನ್ನ 15 ವರ್ಷಗಳನ್ನು ಯಶಸ್ವೀ ಹೆಜ್ಜೆಗಳೊಂದಿಗೆ ಪೂರೈಸುತ್ತಿದ್ದು , ಹಲವಾರು ಏಳು ಬೀಳುಗಳನ್ನೂ ಮೈಗೂಡಿಸಿಕೊಂಡು ಪ್ರತಿಯೊಂದು ವರ್ಷಗಳಲ್ಲಿಯೂ ತನ್ನ ಕಾರ್ಯಚಟುವಟಿಕೆಗಳಿಂದ ಅನಿವಾಸಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು , ಅನಿವಾಸಿ ದೀನೀ ಪ್ರೆಮಿಗಳಿಗಾಗಿ ಹಲವಾರು ಧಾರ್ಮಿಕ ಕಾರ್ಯಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರಸಕ್ತ15 ವರ್ಷಗಳ ಪೂರೈಕೆಯ ನೆನಪಿಗಾಗಿ ಯು ಎ ಈ ರಾಷ್ಟ್ರೀಯ ದಿನಾಚರನೆಯೊಂದಿಗೆ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಕಾರ್ಯಕ್ರಮವು ಸರ್ವ ಕ್ಷೇತ್ರಗಳಲ್ಲೂ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ನಂತರ ದುಬೈ ಸಮಿತಿ ಗೌರವಾಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ ರವರು , ಕಾರ್ಯಕ್ರಮವನ್ನು ಉಲ್ಲೇಖಿಸಿ ಮಾತನಾಡುತ್ತಾ , ದೇಶ ಪ್ರೇಮದ ಬಗ್ಗೆ ಇಸ್ಲಾಂ ನೀಡಿದ ಮಹತ್ವವನ್ನು ವಿವರಿಸಿ , ವಿದೇಶದಲ್ಲಿರುವ ನಮಗೆ ಯಾವುದೇ ಕಷ್ಟ ತೊಂದರೆಗಳನ್ನು ನೀಡದೆ ಸ್ವಂತ ರಾಷ್ಟ್ರೀಯರಂತೆ ಬಾಳಿ ಬದುಕಲು ಅನುವು ಮಾಡಿಕೊಡುತ್ತಾ ಬಂದಿರುವ ಆಡಳಿತಾಧಿಕಾರಿಗಳ ಉದಾತ್ತ ಮನೋಭಾವವನ್ನು ಶ್ಲಾಘಿಸಿ , ವಿದೇಶದಲ್ಲಿರುವ ನಾವು ಇಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಬಾಗಿಗಲಾಗುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸುವಂತೆ ವಿನಂತಿಸಿದರು.
ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಪಧಾಧಿಕಾರಿಗಳು
ಛೇರ್ಮನ್ : ಶರೀಫ್ ಕಾವು ಬಿ ಕೆ
ಸಹ ಛೇರ್ಮನ್ : ಅಬ್ದುಲ್ ಖಾದರ್ ಬೈತಡ್ಕ , ಸುಲೈಮಾನ್ ಮೌಲವಿ ಕಲ್ಲೇಗ , ಹನೀಫ್ ಅರಿಯಮೂಲೆ
ಮುಖ್ಯ ಸಲಹೆಗಾರರು : ರಫೀಕ್ ಅತೂರ್ , ಅಬ್ದುಲ್ ರಝಾಕ್ ಸೊಂಪಾಡಿ
ಪ್ರಧಾನ ಕಾರ್ಯದರ್ಶಿ : ಹಮೀದ್ ಮಣಿಲ
ಕಾರ್ಯದರ್ಶಿ : ಮುಸ್ತಫಾ ಗೂನಡ್ಕ , ಅಶ್ರಫ್ ಪರ್ಲಡ್ಕ , ಜಬ್ಬಾರ್ ಬೈತಡ್ಕ
ಕೋಶಾಧಿಕಾರಿ : ಎಸ್ ಎಮ್ ಅಶ್ರಫ್ ಮಾಂತೂರ್
ಮಾಧ್ಯಮ ಪ್ರತಿನಿಧಿ : ಜಾಬೀರ್ ಬೆಟ್ಟಂಪಾಡಿ , ಅಸೀಫ್ ಮರೀಲ್ , ಅಝೀಝ್ ಸೊರಕೆ
ಸಂಚಾಲಕರಾಗಿ : ಅಶ್ರಫ್ ಅರ್ಥಿಕೆರೆ, ಅಬ್ದುಲ್ ರಝಾಕ್ ನೀರ್ಕಜೆ , ರಫೀಕ್ ಮುಕ್ವೆ , ಅಸೀಫ್ ಕಂಬಳಬೆಟ್ಟು , ನೌಶಾದ್ ಫೈಝಿ , ರಿಫಾಯಿ ಗೂನಡ್ಕ , ಸಾಜಿದ್ ಆರ್ಲಪದವು , ಹನೀಫ್ ಮುಸ್ಲಿಯಾರ್ ಬಿಸಿ ರೋಡ್, ಶಾಫಿ ಮುಲಾರ್ ಪಟ್ನ , ಅಬ್ದುಲ್ ರಶೀದ್ ಮುನ್ನ , ಬಷೀರ್ ಅರಿಯಡ್ಕ , ಝಕರಿಯ ಸಂಪ್ಯ , ಸಿನಾನ್ ಪರ್ಲಡ್ಕ, ಆಸಿಫ್ ಬಿ ಸಿ ರೋಡ್, ಶಾಫಿ ಮೂಡಬಿದರೆ , ಶರೀಫ್ ಕೊಡಿನೀರ್ , ಯಾಕೂಬ್ ಕಡಬ , ಸಫಾ ಇಸ್ಮಾಯಿಲ್ , ಬಷೀರ್ ಅರಿಯಮೂಲೆ , ಅನ್ವರ್ ಪೆರುವಾಯಿ , ಉಸ್ಮಾನ್ ಕೆಮ್ಮಿಂಜೆ , ಝಾಕರಿಯ ಮುಲಾರ್ , ಮೂಸ ಪೆರುವಾಯಿ , ಲತೀಫ್ ಕೂರ್ನಡ್ಕ , ಶಾಹುಲ್ ಬಿ ಸಿ ರೋಡ್ , ನಾಸೀರ್ ಮಂಗಿಲಪದವು .
15 ನೇ ವಾರ್ಷಿಕೋತ್ಸವದ ಅಂಗವಾಗಿ ಕೆ ಐ ಸಿ ಸ್ಮರಣ ಸಂಚಿಕೆ ಬಿಡುಗಡೆ; ಚೇರ್ಮನ್ ಆಗಿ ಸಯ್ಯದ್ ಆಸ್ಕರ್ ಅಲಿ ತಂಙಲ್ ಕೊಲ್ಪೆ , ಕಾರ್ಯದರ್ಶಿಯಾಗಿ ಬದ್ರುದ್ದೀನ್ ಹೆಂತಾರ್
ಶೈಕ್ಷಣಿಕ ಕ್ಷೇತ್ರದಲ್ಲೇ ಮಹತ್ತರವಾದ ಯಶಸ್ಸನ್ನೇ ರೂಪಿಸಿಕೊಂಡು ಬಂದಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ತನ್ನ 15 ವರ್ಷಗಳ ಕಾರ್ಯಚಟುವಟಿಕೆ , ದೀನೀ ಪ್ರಬ್ಹೊಧನೆಗಳನ್ನೋಳಗೊಂಡ ಸ್ಮರಣೆ ಸಂಚಿಕೆಯನ್ನು ಹೊರತರಲಿದ್ದು ಇದರ ಜವಾಬ್ದಾರಿಗಾಗಿ 7 ಜನರ ತಂಡವನ್ನು ರಚಿಸಲಾಯಿತು . ಇಸ್ಲಾಮಿನ ಚರಿತ್ರೆ , ಕವನ ಲೇಖನ , ಕೆ ಐ ಸಿ ನಡೆದು ಬಂದ ಹಾದಿ ಹಾಗೂ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ , ಅಲ್ಲಿನ ಶಿಕ್ಷಣ ಪದ್ಧತಿ , ಮುಂದಿನ ಕಾರ್ಯ ಯೋಜನೆಗಳನ್ನೋಳಗೊಂಡ ಸವಿಸ್ತಾರವಾದ ಪ್ರತಿ ಇದಾಗಿದ್ದು , ಜಾಹಿರಾತುದಾರರು , ಯುವ ಲೇಖಕರು ತಮ್ಮೊಂದಿಗೆ ಸಹಕರಿಸುವಂತೆ ವಿನಂತಿಸಿಕೊಳ್ಳಲಾಯಿತು.
ಸಮಿತಿ ಪಧಾಧಿಕಾರಿಗಳಾಗಿ
ಚೇರ್ಮನ್ : ಸಯ್ಯದ್ ಆಸ್ಕರ್ ಅಲಿ ತಂಙಲ್ ಕೊಲ್ಪೆ ,
ಪ್ರಧಾನ ಕಾರ್ಯದರ್ಶಿಯಾಗಿ : ಬದ್ರುದ್ದೀನ್ ಹೆಂತಾರ್
ಪಧಾಧಿಕಾರಿಗಳಾಗಿ : ಅಬ್ದುಲ್ ಸಲಾಂ ಬಪ್ಪಲಿಗೆ , ರಝಾಕ್ ಹಾಜಿ ಮಣಿಲ , ಅಬ್ಬಾಸ್ ಕೆಕುಡೆ , ಸಮೀರ್ ಇಬ್ರಾಹಿಮ್ ಕಲ್ಲಾರೆ , ನವಾಝ್ ಬಿ ಸಿ ರೋಡ್ , ಇಕ಼್ಬಾಲ್ ಬೈತಡ್ಕ , ಶಂಸುದ್ದೀನ್ ಹನೀಫಿ .

