ರಾಷ್ಟ್ರೀಯ

ಮಧ್ಯಪ್ರದೇಶದ ರೆಸ್ಟೋರಂಟ್‌ವೊಂದರಲ್ಲಿ ಸ್ಫೋಟ: 35 ಸಾವು, 40ಕ್ಕೂ ಹೆಚ್ಚು ಜನ ಗಾಯ

Pinterest LinkedIn Tumblr

MP cylinder blast

ಝಬುವಾ(ಏಜೆನ್ಸೀಸ್‌): ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಪೆತ್ಲವಾಡ್‌ ಪಟ್ಟಣದ ರೆಸ್ಟೋರಂಟ್‌ವೊಂದರಲ್ಲಿ ಶನಿವಾರ ಸಂಭವಿಸಿದ ಸ್ಫೋಟದಿಂದ ಕಟ್ಟಡ ಕುಸಿದು 35 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

MP cylinder blast1

ಮೊದಲು ಸ್ಫೋಟ ಸಂಭವಿಸಿ ಬಳಿಕ ಕಟ್ಟಡ ಕುಸಿದಿದೆ. ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಗ್ಯಾಸ್‌ ಸಿಲಿಂಡರ್‌ ಸ್ಫೋಟ ಘಟನೆಗೆ ಕಾರಣ ಎನ್ನಲಾಗಿದೆ. ಕುಸಿದ ಕಟ್ಟಡದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು ಎಂಬ ಶಂಕೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ. ಕಟ್ಟಡ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ರೆಸ್ಟೋರಂಟ್‌ನ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.

Write A Comment