ರಾಷ್ಟ್ರೀಯ

ಬೋರ್ವೆಲ್ ಗೆ ಬಿದ್ದ 2 ವರ್ಷದ ಮಗು: 19 ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣೆ !

Pinterest LinkedIn Tumblr

PTI6_24_2012_000150B

ಶಿಕೋಹಾಬಾದ್: ಉತ್ತರಪ್ರದೇಶದ ಶಿಕೋಹಾಬಾದ್ ಬೋರ್ವೆಲ್ ಒಂದಕ್ಕೆ ಬಿದ್ದಿದ್ದ ಎರಡು ವರ್ಷದ ಕೂಸನ್ನು 19 ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ರಕ್ಷಿಸಲಾಗಿದೆ.

ರಾಜ್ಯ ಸರ್ಕಾರದ ಅಧಿಕಾರಿ ಸಿಬಂದಿಯ ಯಶಸ್ವಿ ಕಾರ್ಯಾಚರಣೆಯ ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ಪ್ರಕಾರ ಮಗುವಿಗೆ ಶ್ವಾಸಕೋಶ ಸೋಂಕು ತಗುಲಿದೆ ಆದರೆ ಉಳಿದಂತೆ ಮಗು ಆರೋಗ್ಯವಾಗಿದೆ ಎಂದಿದ್ದಾರೆ.

ಮುಚ್ಚದ ಬೋರ್ವೆಲ್ ಒಂದಕ್ಕೆ ನಿನ್ನೆ ಸುಮಾರು ಮಧ್ಯಾಹ್ನ 12 ಗಂಟೆಗೆ ಮಗು ಬಿದ್ದಿತ್ತು. ಆ ಬೋರ್ವೆಲ್ ನಿಂದ ಆಚೆಗೆ 60 ಅಡಿಯ ಸುರಂಗ ಕೊರೆದು ಮಗುವನ್ನು ರಕ್ಷಿಸಲಾಗಿದೆ.

Write A Comment