ಕರ್ನಾಟಕ

1 ದಿನದ ಹೋರಾಟದಿಂದ ಏನ್ ಲಾಭ ? ಚಿತ್ರರಂಗಕ್ಕೆ ನಟಿ ರೂಪಶ್ರಿ

Pinterest LinkedIn Tumblr

roopashree-ಬೆಂಗಳೂರು: ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಸ್ಯಾಂಡಲ್ ವುಡ್ ನಟಿ ರೂಪಶ್ರೀ ಕನ್ನಡ ಚಿತ್ರರಂಗದ ಬೆಂಬಲದ ಬಗ್ಗೆ ವ್ಯಂಗ್ಯವಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಒಂದು ದಿನದ ಹೋರಾಟದಿಂದ ಏನು ಮಾಡಲು ಸಾಧ್ಯ? ಕಳಸಾ ಬಂಡೂರಿ ವಿಚಾರದಲ್ಲಿ ಪ್ರಚಾರಕ್ಕಾಗಿ ಚಿತ್ರರಂಗ ಹೋರಾಟದ ನಾಟಕವಾಡುತ್ತಿದೆ ಎಂದು ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆ ಬಗ್ಗೆ ಗೊತ್ತಿಲ್ಲದವರಿಂದ ಹೋರಾಟ ನಡೆಸಿದರೆ ಏನು ಪ್ರಯೋಜನ. ಪ್ರಚಾರಕ್ಕಾಗಿ ಹೋರಾಟದ ನಾಟಕ ಸರಿಯಲ್ಲ ಎಂದು ರೂಪಶ್ರೀ ಹೇಳಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಕುರಿತಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಸೆ.13ರಂದು ಕನ್ನಡ ಚಿತ್ರರಂಗ ಉತ್ತರ ಕರ್ನಾಟಕಕ್ಕೆ ತೆರಳಿ ಬೆಂಬಲ ನೀಡುವುದಾಗಿ ಮೊನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.
-ಉದಯವಾಣಿ

Write A Comment