ಅಂತರಾಷ್ಟ್ರೀಯ

ಬ್ರಿಟನನ್ನು ಅತಿ ದೀರ್ಘ ಆಳಿದ ರಾಣಿ ಎಲಿಝಬೆತ್

Pinterest LinkedIn Tumblr

3rani

ಎಡಿನ್‌ಬರ್ಗ್, ಸೆ.9: ಬ್ರಿಟನನ್ನು ಅತಿ ದೀರ್ಘ ಅವಧಿಗೆ ಆಳಿದ ರಾಣಿ ಎಂಬ ಹೆಗ್ಗಳಿಕೆಯನ್ನು ರಾಣಿ ಎಲಿಝಬೆತ್ ಗಳಿಸಿದ್ದಾರೆ.

89 ವರ್ಷದ ರಾಣಿ ಬುಧವಾರ ಸಂಜೆ ಸ್ಥಳೀಯ ಸಮಯ 5:30ಕ್ಕೆ ಹಿಂದಿನ ರಾಣಿ ವಿಕ್ಟೋರಿಯರ ದಾಖಲೆಯನ್ನು ಮುರಿದರು. ವಿಕ್ಟೋರಿಯ 63 ವರ್ಷ, 7 ತಿಂಗಳು, 2 ದಿನ, 16 ಗಂಟೆ ಮತ್ತು 23 ನಿಮಿಷಗಳ ಕಾಲ ಸಿಂಹಾಸನದಲ್ಲಿದ್ದರು.

ಎರಡನೆ ಮಹಾಯುದ್ಧದ ಬಳಿಕ ಯುದ್ಧದ ದುಷ್ಪರಿಣಾಮದಿಂದ ಬ್ರಿಟನ್ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ತನ್ನ 25ನೆ ವರ್ಷ ಪ್ರಾಯದಲ್ಲಿ ರಾಣಿ ಎಲಿಝಬೆತ್ ಅಧಿಕಾರಕ್ಕೇರಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ರಾಣಿಯನ್ನು ಅಭಿನಂದಿಸಿದರು.

Write A Comment