ಉಡುಪಿ: ದೊಡ್ಡಣಗುಡ್ಡೆಯ ರಿಕ್ಷಾ ಚಾಲಕ ಕೃಷ್ಣಪ್ಪ ಅವರು ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ದೊಡ್ಡಣಗುಡ್ಡೆಯ ಶೀತಲ್ ಎನ್ನುವವರು ಮರೆತು ಬಿಟ್ಟು ಹೋಗಿದ್ದ ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸೆ. 8 ರಂದು ರಿಕ್ಷಾದಲ್ಲಿ ಪ್ರಯಾಣಿಸಿದ್ದ ಶೀತಲ್ ಅವರ ಬ್ಯಾಗಿನಲ್ಲಿ 1 ಲ.ರೂ.ಗೂ ಅಧಿಕ ಮೌಲ್ಯ ಚಿನ್ನಾಭರಣವಿತ್ತು ಹಾಗೂ ಇತರ ಅಮೂಲ್ಯ ದಾಖಲೆಗಳು ಇದ್ದವು. ಪ್ರಯಾಣಿಕೆ ಬ್ಯಾಗು ಬಿಟ್ಟು ಹೋಗಿರುವುದನ್ನು ಗಮನಿಸಿದ ಚಾಲಕ ಕೃಷ್ಣಪ್ಪ ಆನಂತರ ಮಹಿಳೆಯನ್ನು ಸಂಪರ್ಕಿಸಿ ಬ್ಯಾಗು ಮರಳಿಸಿದ್ದಾರೆ.
ರಿಕ್ಷಾ ಚಾಲಕ ತನ್ನ ಪ್ರಾಮಾಣಿಕತೆಯನ್ನು ಮೆರೆದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.
