ಅಂತರಾಷ್ಟ್ರೀಯ

ಮಿಂಚಿನ ಸಂಚಾರಕ್ಕೆ ಸಿದ್ದವಾಯ್ತು ವಿಮಾನ !

Pinterest LinkedIn Tumblr

planeವಿಮಾನದಲ್ಲಿ ಹೋಗುವುದೆಂದರೆ ಅದೊಂಥರಾ ಖುಷಿ. ಅದರಲ್ಲಿಯೂ ಸುರಕ್ಷಿತವಾಗಿ ಶೀಘ್ರವಾಗಿ ತಲುಪುವ ವ್ಯವಸ್ಥೆಯೂ ಹೌದು. ಆದರೆ ಸದ್ಯದಲ್ಲಿಯೇ ನೀವು ಈ ವಿಮಾನಕ್ಕಿಂತ ಶೀಘ್ರದಲ್ಲಿ ತಲುಪುತ್ತೀರಿ. ಹೀಗೆ ಅಂತೀರಾ..? ಈ ಸ್ಟೋರಿ ಓದಿ.

ಹೌದು. ರಷ್ಯಾ ವಿಜ್ಞಾನಿಗಳು ಹೊಸ ಹೈಪರ್ ಸಾನಿಕ್ ಇಂಜಿನ್ ಅಭಿವೃದ್ಧಿ ಪಡಿಸಿದ್ದು, ಈ ಇಂಜಿನ್ ಹೊಂದಿರುವ ವಿಮಾನ 9000 ಕಿ.ಮೀ. ಪ್ರತೀ ಗಂಟೆ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆಯಂತೆ. ಪ್ರಸ್ತುತ ರಷ್ಯಾದಲ್ಲಿ ನಡೆಯುತ್ತಿರುವ ಎಂಎಕೆಎಸ್-2015 ಏರ್ ಷೋದಲ್ಲಿ ಈ ಇಂಜಿನ್ ಅನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಈ ನೂತನ ಇಂಜಿನ್ ಅನ್ನು ಮಾಸ್ಕೋದ ರಾಷ್ಟ್ರೀ ವೈಮಾನಿಕ ಮೋಟರ್ ಸಂಸ್ಥೆಯು ಅಭಿವೃದ್ಧಿ ಪಡೆಸಿದೆ.

ವಿಶೇಷವೆಂದರೆ ಈ ವಿಮಾನದ  ಇಂಜಿನ್ 5 ರಿಂದ 7.5 ಮ್ಯಾಕ್ ವೇಗ (6,125 ರಿಂದ 9,187 ಕಿ.ಮೀ./ಗಂ) ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು ಪರೀಕ್ಷಾರ್ಥ ಹಾರಾಟದ ಸಂದರ್ಭದಲ್ಲಿ 7.4 ಮ್ಯಾಕ್ ವೇಗವನ್ನು ತಲುಪಿತ್ತು ಎನ್ನಲಾಗಿದೆ.

ಒಂದೊಮ್ಮೆ ಇದೇನಾದರೂ ಯಶಸ್ಸು ಕಂಡಿದ್ದೇ ಹೌದಾದರೆ ವಿಮಾನಯಾನ ಕ್ಷೇತ್ರದಲ್ಲಿ ಮತ್ತಷ್ಟು ಬದಲಾವನೆಗಲಾಗಳಿವೆ . ಅಷ್ಟೇ ಅಲ್ಲ, ಮತ್ತಷ್ಟು ಶೀಘ್ರವಾಗಿ ನಾವು ತೆರಳಬೇಕಾದ ಸ್ಥಳಕ್ಕೆ ತಲುಪಬಹುದಾಗಿದೆ.

Write A Comment