ಬೆಂಗಳೂರು, ಆ.23: ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಬಿಬಿಎಂಪಿಯ 197 ವಾರ್ಡ್ ಗಳ ಮತಎಣಿಕೆ ಆ.25ರ ಮಂಗಳವಾರ ನಡೆಯಲಿದ್ದು, ಶಿವಾಜಿನಗರ, ಶಾಂತಿನಗರ, ರಾಜರಾಜೇಶ್ವರಿನಗರ, ಮಲ್ಲೇಶ್ವರಂ, ಕೆಆರ್‌ಪುರಂ ಸೇರಿದಂತೆ 19 ಸ್ಥಳಗಳಲ್ಲಿ ಮತಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮತದಾನ ಪೂರ್ಣಗೊಂಡ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಎಣಿಕೆ ಕೇಂದ್ರಗಳಲ್ಲಿ ಇರಿಸಲಾಗುವುದು. ಮತಯಂತ್ರಗಳ ಭದ್ರತೆಗೆ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಆಯಾ ವಲಯಗಳ ಡಿಸಿಪಿಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ರಾಜರಾಜೇಶ್ವರಿ ನಗರದ ವಡೇರಹಳ್ಳಿ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆ, ಕ್ವೀನ್ಸ್ ರಸ್ತೆಯ ಕಮಲಾಬಾಯಿ ಸ್ಕೂಲ್, ಮಲ್ಯ ರಸ್ತೆಯ ಸೈಂಟ್ ಜೋಸೆಫ್ ಹೈಸ್ಕೂಲ್, ಶೇಷಾದ್ರಿ ರಸ್ತೆಯಲ್ಲಿನ ಗೃಹ ವಿಜ್ಞಾನ ಕಾಲೇಜು, ರಾಜಾಜಿನಗರದ ಜಗಜ್ಯೋತಿ ಬಸವೇಶ್ವರ ಕಾಲೇಜು, ಚಾಮರಾಜಪೇಟೆ ಬಿಬಿಎಂಪಿ ಪಿಯು ಕಾಲೇಜು, ಬಸವನಗುಡಿ ಬಿಎಂಎಸ್ ಮಹಿಳಾ ಕಾಲೇಜು, ಕೆ.ಆರ್‌ಪುರಂ ದೂರವಾಣಿ ನಗರದ ವಿದ್ಯಾಮಂದಿರ ಸ್ಕೂಲ್.ಮಹಾಲಕ್ಷ್ಮೀಪುರಂನ ಮರಾಠ ಕಲ್ಯಾಣ ಸಂಘ ಸ್ಕೂಲ್, ಮಲ್ಲೇಶ್ವರಂ ಸರಕಾರಿ ಜೂನಿಯರ್ ಕಾಲೇಜು, ಹೆಬ್ಬಾಳ ಪಶುವೈದ್ಯಕೀಯ ಕಾಲೇಜು, ಫ್ರೇಜರ್ ಟೌನ್ ಪಾಲಿಕೆ ಬಾಲಕಿಯರ ಕಾಲೇಜು, ಕಾಕ್ಸ್‌ಟೌನ್‌ನಲ್ಲಿರುವ ಮರಿಯಾ ನಿಕೇತನ ಹೈಸ್ಕೂಲ್, ಬಸವೇಶ್ವರನಗರದ ಅಂಬೇಡ್ಕರ್ ಮೈದಾನ ಸಭಾಂಗಣ.
ವಿಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀನಗರ ಪಿಇಎಸ್ ಕಾಲೇಜು, ಬನಶಂಕರಿ ಎರಡನೆ ಹಂತದ ಕೆಂಪೇಗೌಡ ವೈದ್ಯಕೀಯ ಕಾಲೇಜು, ಕೋರಮಂಗಲ ಸೇವಾಸದನ ಸೇರಿ ಒಟ್ಟು 19 ಸ್ಥಳಗಳಲ್ಲಿ ವುತಯಂತ್ರಗಳನ್ನು ಇರಿಸಲಾಗಿದ್ದು, ಅೇ ಸ್ಥಳದಲ್ಲೆ ಮತ ಎಣಿಕೆ ಕಾರ್ಯ ನಡೆಯಲಿದೆ.
