ಅಂತರಾಷ್ಟ್ರೀಯ

ಗೂಗಲ್‌ಗಿಂತಲೂ ಹೆಚ್ಚು ನಿಖರವಾದ ಸರ್ಚ್ ಎಂಜಿನ್; ಭಾರತೀಯ ವಿದ್ಯಾರ್ಥಿಯಿಂದ ಸಂಶೋಧನೆ

Pinterest LinkedIn Tumblr

anmol_tukrel

ಟೊರೊಂಟೊ, ಆ.23: ಕೆನಡದಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿ ಅನ್‌ಮೋಲ್ ತುಕ್ರಾಲ್(16) ಗೂಗಲ್‌ಗಿಂತಲೂ ಹೆಚ್ಚು ನಿಖರವಾದ ಸರ್ಚ್ ಎಂಜಿನ್ ವಿನ್ಯಾಸಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಗೂಗಲ್ ಸರ್ಚ್ ಎಂಜಿನ್‌ಗಿಂತಲೂ ಶೇಕಡಾ 47ರಷ್ಟು ಹೆಚ್ಚು ನಿಖರವಾದ ಸರ್ಚ್ ಎಂಜಿನನ್ನು ತಾನು ವಿನ್ಯಾಸಗೊಳಿಸಿರುವುದಾಗಿ ಅನ್‌ಮೋಲ್ ಹೇಳಿದ್ದಾರೆ. ತನ್ನ ಪ್ರೌಢಶಾಲಾ ಅಭ್ಯಾಸದ ಭಾಗವಾಗಿ ವಿನೂತನ ಸರ್ಚ್ ಎಂಜಿನನ್ನು ವಿನ್ಯಾಸಗೊಳಿಸಿರುವ ಯುವ ವಿದ್ಯಾರ್ಥಿ ಅನ್‌ಮೋಲ್ ‘ಗೂಗಲ್ ವಿಜ್ಞಾನ ಮೇಳ’ದಲ್ಲೂ ಅದನ್ನು ಪ್ರದರ್ಶಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ತನ್ನ ವ್ಯಾಸಂಗ ಭಾಗವಾಗಿ ತುಕ್ರೆಲ್ ಬೆಂಗಳೂರಿನ ಐಸ್‌ಕ್ರೀಂ ಲ್ಯಾಬ್ಸ್ ಸಂಸ್ಥೆಯಲ್ಲಿ ತರಬೇತಿಗೆ ಹಾಜರಾಗಿದ್ದ ವೇಳೆ ಅನ್‌ಮೋಲ್‌ಗೆ ಈ ವ್ಯಕ್ತಿಗತ ಸರ್ಚ್ ಎಂಜಿನ್‌ನ ಪರಿಕಲ್ಪನೆ ಮೂಡಿತ್ತು ಎಂದು ಮೂಲಗಳು ತಿಳಿಸಿವೆ. ಇತರ ಸರ್ಚ್ ಎಂಜಿನ್‌ಗಳಂತೆ ಫಲಿತಾಂಶ ನೀಡಲು ವ್ಯಕ್ತಿಯ ಸ್ಥಳ ಅಥವಾ ಬ್ರೌಸಿಂಗ್ ಹಿನ್ನೆಲೆಯನ್ನು ಬಳಸದೆ ತನ್ನ ಈ ತಂತ್ರಜ್ಞಾನವು ಬಳಕೆದಾರನ ವ್ಯಕ್ತಿಗತ ಅಗತ್ಯಗಳ ಕುರಿತು ಮಾತ್ರವೇ ಮಾಹಿತಿ ಒದಗಿಸಲಿದೆ ಎಂದು ಅನ್‌ಮೋಲ್ ವಿವರಿಸುತ್ತಾರೆ.

Write A Comment