ಮನೋರಂಜನೆ

ಹರ್ಭಜನ್ ಸಿಂಗ್ ಮದುವೆ ಯಾವಾಗ ಗೊತ್ತಾ…?

Pinterest LinkedIn Tumblr

1702hargeetaಇತ್ತೀಚೆಗೆ ಟೀಂ ಇಂಡಿಯಾ ಆಟಗಾರರಿಗೆ ಕಂಕಣಬಲ ಕೂಡಿ ಬರುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ರೋಹಿತ್ ಶರ್ಮಾ, ದಿನೇಶ್ ಕಾರ್ತೀಕ್ ಈಗಾಗಲೇ ಈ ವರ್ಷವೇ ವಿವಾಹವಾಗಿ ತಮ್ಮ ದಾಂಪತ್ಯ ಜೀವನ ಆರಂಭಿಸಿದ್ದರೆ ಭಾರತ ತಂಡದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಸದ್ಯದಲ್ಲಿಯೇ ಹಸೆ ಮಣೆ ಏರಲಿದ್ದಾರೆ.

ಹೌದು. ಹರ್ಭಜನ್ ಸಿಂಗ್ ತಮ್ಮ ಪ್ರೇಯಸಿ ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ವಿವಾಹವಾಗಲಿದ್ದು ಬಲ್ಲ ಮೂಲಗಳ ಪ್ರಕಾರ ಆಕ್ಟೋಬರ್ 29 ರಂದು ಜಲಂಧರ್ ನಲ್ಲಿ ಇವರ ವಿವಾಹ ನೆರವೇರಲಿದ್ದು ಒಂದೊಮ್ಮೆದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯವನ್ನಾಡಲು ಹರ್ಭಜನ್‌ಗೆ ಅವಕಾಶ ಸಿಕ್ಕಿದರೆ ಮದುವೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸದ್ಯ ಶ್ರೀಲಂಕಾ ವಿರುದ್ಧ  ಟೆಸ್ಟ್ ಆಡುತ್ತಿರುವ ಹರ್ಭಜನ್ ಬಾಲಿವುಡ್ ನಟಿ ಗೀತಾ ಬಸ್ರಾ ಜತೆ ಹಲವಾರು ವರ್ಷಗಳ ಪ್ರೇಮ ಸಂಬಂಧ ಕುದುರಿಸಿದ್ದರು. ಅಲ್ಲದೇ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಮಾತೂ ಕೇಳಿ ಬಂದಿತ್ತು. ಈ  ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಗೀತಾ, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ತಿಳಿಸಿದ್ದನ್ನಿಲ್ಲಿ ಸ್ಮರಿಸಬಹುದು.

Write A Comment