ಕೊಲಂಬೊ, ಆ.7- ಭಾರತ ತಂಡದ ಇಶಾಂತ್‌ಶರ್ಮಾರ ಮಾರಕ ಬೌಲಿಂಗ್ ಎದುರು ಪರದಾಡಿದ ಶ್ರೀಲಂಕಾ ಪ್ರೆಸಿಡೆಂಟ್ ಇಲೆವೆನ್ ತಂಡವು 13 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.ವಿರಾಟ್ ಕೊಹ್ಲಿ ಪಡೆದ ನೀಡಿದ 352 ರನ್‌ಗಳ ಗುರಿಯನ್ನು ಬೆನ್ನಟ್ಟಿದ ತಿರುಮನೆ ಬಳಗದ ಆರಂಭಿಕ ಆಟಗಾರರಾದ ಡಿ.ಎಂ.ಸಿಲ್ವಾ ಹಾಗೂ ಸಿಲ್ವಾ ರನ್ ಖಾತೆಯನ್ನೇ ತೆರೆಯದೆ ಇಶಾಂತ್‌ನ ವೇಗದ ಬೌಲಿಂಗ್‌ಗೆ ತುತ್ತಾದರು. ನಂತರ ಬಂದ ಅನುಭವಿ ಆಟಗಾರ ಉಪಲ್ ತರಂಗ ಕೂಡ ಶೂನ್ಯ ಸುತ್ತಿ ಇಶಾಂತ್‌ಗೆ ಬಲಿಯಾದರು. ಈ ನಡುವೆ ಎಚ್ಚರಿಕೆ ಆಟವಾಡುತ್ತಿದ್ದ ನಾಯಕ ತಿರುಮನೆ (5) ಇಶಾಂತ್ ಬೌಲಿಂಗ್‌ನಲ್ಲಿ ರಾಹುಲ್‌ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಪೆರೆರಾ ಕೂಡ ಶೂನ್ಯ ಸುತ್ತಿ ಇಶಾಂತ್‌ಗೆ 5 ವಿಕೆಟ್‌ನ ರೂಪದಲ್ಲಿ ಬಲಿಯಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ತಿರುಮನೆ ಬಳಗ 11 ಓವರ್‌ಗಳಲ್ಲಿ 27 ರನ್‌ಗಳನ್ನು ಗಳಿಸಿ 5 ವಿಕೆಟ್‌ಗಳನ್ನು ಕಳೆದುಕೊಂಡು ಫಾಲೋಆನ್ ಭೀತಿಗೆ ಬಿದ್ದಿದೆ.ಭಾರತ 351ಕ್ಕೆ ಅಲೌಟ್:ನಿನ್ನೆ ದಿನದ ಅಂತ್ಯಕ್ಕೆ 314 ರನ್ ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಪಡೆ ರಜಿತಾರ ಮಿಂಚಿನ ಬೌಲಿಂಗ್ (5 ವಿಕೆಟ್)ಗೆ ಸಿಲುಕಿ 351 ರನ್‌ಗಳಿಗೆ ಅಲೌಟಾಯಿತು.