ರಾಷ್ಟ್ರೀಯ

ನಾನು ಸುಂದರವಾಗಿಲ್ಲ ಎಂದು ಭಾರ್ತಿ ಪತ್ನಿ ವ್ಯಂಗ್ಯ

Pinterest LinkedIn Tumblr

lipikaದೆಹಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ ಸುಂದರ ಮಹಿಳೆಗೆ ರಕ್ಷಣೆ ನೀಡುತ್ತೇವೆ ಎಂಬ ವಿವಾದಾಸ್ಪದ ಹೇಳಿಕೆಗೆ ಅವರ ಪತ್ನಿ ಲಿಪಿಕಾ ಮಿತ್ರಾ ವ್ಯಂಗ್ಯವಾಡಿದ್ದಾರೆ.

ನನ್ನ ರಕ್ಷಣೆ ಕುರಿತಾಗಿ ಭಾರ್ತಿ ಅವರಿಗೆ ಯೋಚನೆಯಿಲ್ಲ.  ಬದಲಾಗಿ ಸುಂದರ ಮಹಿಳೆಯರ ರಕ್ಷಣೆ ಬಗ್ಗೆ ಚಿಂತಿತರಾಗಿದ್ದಾರೆ ಎಂದಿರುವ ಲಿಪಿಕಾ ನಾನೇನು ರೂಪವತಿಯಲ್ಲ. ಬಹುಶಃ ಅದೇ ಕಾರಣಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿರಬಹುದು ಎಂದು ಕಟಕಿಯಾಗಿದ್ದಾರೆ.

ರಾಷ್ಟ್ರ ರಾಜಧಾನಿಯ ಪೊಲೀಸ್ ವ್ಯವಸ್ಥೆಯನ್ನು ಆಮ್ ಆದ್ಮಿ ತನ್ನ  ಸುಪರ್ದಿಗೆ ತೆಗೆದುಕೊಂಡರೆ, ಸುಂದರ ಮಹಿಳೆಯರೂ ಮಧ್ಯರಾತ್ರಿ ನಂತರ ದಿಲ್ಲಿಯಲ್ಲಿ ಯಾವುದೇ ಭಯವಿಲ್ಲದೆ ಓಡಾಡಬಹುದು ಎಂದು ಸೋಮನಾಥ್ ಭಾರ್ತಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ನಡುವೆ ಭಾರ್ತಿ ವಿರುದ್ದ ಈ ಹಿಂದೆ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದ ಲಿಪಿಕಾ ಮತ್ತೊಮ್ಮೆ ಕೆಂಡಕಾರಿದ್ದಾರೆ.

Write A Comment