ಭಾರತದ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಸೈನಿಕರ ಉಪಟಳ ಮುಂದುವರೆದಿದ್ದು ಜಮ್ಮು ಪ್ರದೇಶದ ನಾಲ್ಕು ವಿಭಾಗಗಳ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸುವ ಮೂಲಕ ತನ್ನ ಹಳೆ ಚಾಳಿ ಮುಂದುವರೆಸಿವೆ.
ಭಾನುವಾರ ರಾತ್ರಿ 9.30ರ ವೇಳೆಗೆ ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ಮತ್ತು ಮಂಡಿ ವಿಭಾಗಗಳಲ್ಲಿ ಪಾಕಿಸ್ತಾನಿ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಇದೇ ಸಮಯದಲ್ಲಿ ರಾಜೌರಿ ಜಿಲ್ಲೆಯ ಬಾಲಾಕೋಟೆ ವಿಭಾಗದಲ್ಲೂ ನಮ್ಮ ನೆಲೆಗಳತ್ತ ಗುಂಡು ಹಾರಿಸಿದರು. ಅಷ್ಟೇ ಅಲ್ಲ, ಜಮ್ಮು ಜಿಲ್ಲೆಯ ಪಲ್ಲನ್ವಾಲಾ ರಂಗದಲ್ಲಿಯೂ ಪಾಕಿಸ್ತಾನಿ ರೇಂಜರ್ಗಳು ಬಿಎಸ್ಎಫ್ ಹೊರಠಾಣೆಗಳ ಮೇಲೆ ಯಾವುದೇ ಪ್ರಚೋದನೆಯೂ ಇಲ್ಲದೇ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ.
ಈ ಎಲ್ಲ ಕಡೆಗಳಲ್ಲಿಯೂ ಭಾರತೀಯ ಗಡಿ ಭದ್ರತಾ ಪಡೆ ಸಮರ್ಪಕವಾಗಿ ಗುಂಡಿನ ಪ್ರತ್ಯುತ್ತರ ನೀಡಿದ್ದು ಹಲವು ಸಮಯ ಈ ಕಾಳಗ ಮುಂದುವರೆಯಿತು ಎನ್ನಲಾಗಿದೆ.