ರಾಷ್ಟ್ರೀಯ

ಪಾಕಿಸ್ತಾನದಲ್ಲಿ ಮುದ್ರಿತ ಭಾರತ ಕರೆನ್ಸಿ ಚಲಾಯಿಸುತ್ತಿದ್ದ 6 ಮಂದಿ ಬಂಧನ

Pinterest LinkedIn Tumblr

noteರಾಮೇಶ್ವರಂ,ಆ.2- ಪಾಕಿಸ್ತಾನದಲ್ಲಿ ಮುದ್ರಣವಾಗುವ ನಕಲಿ ಭಾರತೀಯ ನೋಟುಗಳನ್ನು ಕಳ್ಳ ಸಾಗಾಣೆ ಮೂಲಕ ತಂದು ಚಲಾವಣೆಗೆ ಯತ್ನಿಸುತ್ತಿದ್ದ ಬಲಿಷ್ಠ ಗ್ಯಾಂಗ್‌ವೊಂದರ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಈ ಗ್ಯಾಂಗ್‌ನಲ್ಲಿ  ಒಟ್ಟು 16 ಜನರಿದ್ದು , ಇಡೀ ದೇಶಾದ್ಯಂತ ಈ ತಂಡ ಬಾರೀ ಬಲಿಷ್ಠವಾಗಿದೆ. ಅಮೆರಿಕದಲ್ಲಿ ಮುದ್ರಣವಾಗುವ ಭಾರತದ ನಕಲಿ ಕರೆನ್ಸಿಯನ್ನು ಅಲ್ಲಿಂದ ಇಲ್ಲಿಗೆ ತಂದು ಚಲಾವಣೆ ಮಾಡುವಲ್ಲಿ ಈ ಗ್ಯಾಂಗ್ ಅತ್ಯಂತ ಬಲಿಷ್ಠವಾಗಿದೆ ಎಂದು ರಾಮೇಶ್ವರಂ ಪೊಲೀಸರು  ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದಲ್ಲಿ  ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ ತನಿಖೆಗೆ ಗುರಿಪಡಿಸಿದಾಗ ಈ 16 ಜನರ ಕುಖ್ಯಾತ ಗ್ಯಾಂಗ್‌ನ ನೆಟ್‌ವರ್ಕ್ ಬಗ್ಗೆ ಪೊಲೀಸರಿಗೆ ವಿವರ ಮಾಹಿತಿ ಲಭ್ಯವಾಯಿತು. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಇಂದು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಹತ್ತು ಜನ ಖದೀಮರಿಗಾಗಿ ಶೋಧ ಕಾರ್ಯ  ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಅಸಲಿ ನೋಟುಗಳಂತೆಯೇ ಇರುವ 500, 1000 ರೂ. ಮುಖ ಬೆಲೆಯ ನೋಟುಗಳನ್ನು ನೋಡಿ ನಮಗೆ  ಚ್ಚರಿಯಾಯಿತು. ನಕಲಿ ನೋಟುಗಳಿಗೂ, ಅಸಲಿ ನೋಟುಗಳಿಗೂ ಯಾವುದೇ ವ್ಯತ್ಯಾಸವೇ  ಇಲ್ಲ ಎಂದು  ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದ ಈ ನಕಲಿ ಕರೆನ್ಸಿಯನ್ನು ಶ್ರೀಲಂಕಾದ ಮೂಲಕ ಭಾರತಕ್ಕೆ ತರಲಾಗುತ್ತಿದೆ ಎಂದು ಬಂಧಿತರಲ್ಲೊಬ್ಬನಾದ ಮುನೀಸ್ ಅಲಿಯಾಸ್ ಮುರುಗನ್ ಹೇಳಿದ್ದಾನೆ.  ಇವನ ಬಳಿ ಒಂದು ಸಾವಿರ ಮುಖಬೆಲೆಯ 42 ನೋಟುಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment