ಮುಂಬೈ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಾವಿಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೀಗ ತನ್ನ ತಪ್ಪನ್ನು ಸಮರ್ಥಿಸಿಕೊಂಡಿದ್ದು, ಇದೊಂದು ಪ್ರಾಮಾಣಿಕವಾದ ತಪ್ಪಾಗಿದ್ದು ಉದ್ದೇಶ ಪೂರ್ವಕವಾಗಿ ಯಾವ ತಪ್ಪನ್ನು ಮಾಡಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಅಬ್ದುಲ್ ಕಲಾಂ ಅವರ ನಿಧನ ಹೊಂದಿದ್ದರಿಂದ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ತಮ್ಮ ಸಂತಾಪ ಸೂಚಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೇ ಸಾಲಿನಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಹ ಕಲಾಂ ಅವರಿಗೆ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದರು. ತಮ್ಮ ಟ್ವೀಟ್ ನಲ್ಲಿ ಪೆದ್ದುತನ ಪ್ರದರ್ಶಿಸಿದ್ದ ಅನುಷ್ಕಾ ಎಪಿಜೆ ಅಬ್ದುಲ್ ಕಲಾಂ ಹೆಸರಿಗೆ ಬದಲಾಗಿ ಎಬಿಜೆ ಕಲಾಂ ಆಜಾದ್ ಎಂದು ಟೈಪ್ ಮಾಡಿದ್ದರು.
ಹೀಗಾಗಿ ಅನುಷ್ಕಾಳ ಈ ತಪ್ಪಿಗೆ ಟ್ವಿಟರ್ ನಲ್ಲಿ ಭಾರೀ ಟೀಕಾ ಪ್ರಹಾರ ನಡೆದವು. ನಂತರ ಇದನ್ನು ಗಮನಿಸಿದ ಅನುಷ್ಕಾ ತನ್ನ ಟ್ವೀಟ್ ನ್ನು ಡಿಲೀಟ್ ಮಾಡಿ ಮತ್ತೊಂದು ಟ್ವೀಟ್ ಪೋಸ್ಟ್ ಮಾಡಿದ್ದಾಳೆ. ಆದರೆ, ಈ ಟ್ವೀಟ್ ನಲ್ಲೂ ಅನುಷ್ಕಾ ಎಪಿಜೆ ಅಬ್ದುಲ್ ಕಲಾಂ ಆಜಾದ್ ಎಂದು ಬರೆದಿದ್ದಳು. ಮತ್ತೆ ಟ್ವಿಟರ್ ನಲ್ಲಿ ಟೀಕಾ ಪ್ರಹಾರ ನಡೆದಿದೆ. ಮೂರನೇ ಬಾರಿಗೆ ಅನುಷ್ಕಾ ಎಪಿಜೆ ಅಬ್ದುಲ್ ಕಲಾಂ ಎಂದರಿ ಸರಿಯಾಗಿ ಬರೆದು ಸಂತಾಪ ಸೂಚಿಸಿದ್ದರು.
ಈ ಟ್ವೀಟ್ ಗೂ ಪರೋಕ್ಷವಾಗಿ ಟೀಕೆಗಳನ್ನು ವ್ಯಕ್ತಪಡಿಸಿದ ಜನರು ಮೂರನೇ ಬಾರಿಗೆ ಸರಿಯಾಗಿ ಹೆಸರು ಬರೆದಿದ್ದಿಯಾ ಶುಭಾಶಯಗಳು ಎಂದು ಕೋರಿದ್ದರು. ಅನುಷ್ಕಾಳ ಈ ತಪ್ಪು ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೂ. ತನ್ನ ತಪ್ಪು ಕುರಿತಂತೆ ಅನುಷ್ಕಾ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ.
ತನ್ನ ತಪ್ಪು ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಕಲಾಂ ಹೆಸರು ತಪ್ಪಾಗಿ ಬರೆಯುವಲ್ಲಿ ಯಾವುದೇ ರೀತಿಯ ಉದ್ದೇಶಪೂರ್ವಕ ತಪ್ಪುಗಳಿರಲಿಲ್ಲ. ನನ್ನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನನ್ನ ತಪ್ಪು ಪ್ರಾಮಾಣಿಕ ತಪ್ಪಾಗಿದೆ. ನನ್ನ ವಿರುದ್ಧ ಕಂಪ್ಯೂಟರ್, ಮೊಬೈಲ್ ಮೂಲಕ ಹೇಳಿಕೆ ನೀಡುವವರು ಹೇಡಿಗಳಾಗಿದ್ದು, ಧೈರ್ಯವಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಹೇಳಿದ್ದಾರೆ.