ಬೆಂಗಳೂರು: ಪ್ರಾದೇಶಿಕ ಸಾರಿಗೆ ಇಲಾಖೆ ಜಾರಿಗೆ ತಂದಿರುವ ಫ್ಯಾನ್ಸಿ ನಂಬರ್ ಗಳ ಹರಾಜು ಪದ್ದತಿ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದು ಕೊಡುತ್ತಿದೆ.
ಬೆಂಗಳೂರಿನ ಶಾಂತಿ ನಗರ ಪ್ರಾದೇಶಿಕ ಸಾರಿಗೆ ಇಲಾಖೆ ಕಛೇರಿಯಲ್ಲಿ ಹರಾಜು ಮಾಡಲಾದ ಫ್ಯಾನ್ಸಿ ನಂಬರ್ 9999 ಗೆ ಬರೋಬ್ಬರಿ 3.35 ಲಕ್ಷ ರೂ. ಆದಾಯ ತಂದು ಕೊಟ್ಟಿದೆ.
ಬೀದರ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ 9999 ಸಂಖ್ಯೆಯನ್ನು ಈ ಮೊತ್ತಕ್ಕೆ ಖರೀದಿಸಿದ್ದಾರೆ. ಇದನ್ನು ಅವರು ತಮ್ಮ ಹೊಸ ಕಾರಿಗೆ ಬಳಸಿಕೊಳ್ಳಲಿದ್ದಾರೆಂದು ಶಾಸಕರ ಆಪ್ತರು ಹೇಳಿದ್ದಾರೆ.
ಅದೇ ರೀತಿ ಹರಾಜು ಮಾಡಲಾದ ಫ್ಯಾನ್ಸಿ ಸಂಖ್ಯೆ 1 ನ್ನು 2.10 ಲಕ್ಷಕ್ಕೆ ಖರೀದಿಸಲಾಗಿದೆ. ನಂಬರ್ 7, 1.35 ಲಕ್ಷ ರೂ.ಗಳಿಗೆ ಹರಾಜಾಗಿದ್ದರೆ, ನಂಬರ್ 99 ಕ್ಕೆ 55 ಸಾವಿರ ಹಾಗೂ ನಂಬರ್ 9 ಕ್ಕೆ 60 ಸಾವಿರ ರೂ. ಲಭಿಸಿದೆ.