ಮನೋರಂಜನೆ

ಭಜರಂಗಿ ಭಾಯಿಜಾನ್ ಚಿತ್ರದ ಹರ್ಷಾಲಿಗೆ ಸಲ್ಮಾನ್ ಖಾನ್ ನೀಡಿದ ಗಿಫ್ಟ್ ಏನು ? ಇಲ್ಲಿದೆ ಓದಿ…

Pinterest LinkedIn Tumblr

Harshali

ಮುಂಬೈ: ಬಾಲಿವುಡ್‍ನಲ್ಲಿ ನಟಿಸಿದ ಮೊದಲ ಚಿತ್ರದಲ್ಲಿ ಎಲ್ಲರ ಮನಗೆದ್ದ ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾಗೆ ಸಲ್ಮಾನ್ ಕೂಡ ಬೌಲ್ಡ್ ಆಗಿದ್ದಾರೆ. ಸದ್ಯ ಚಿತ್ರದ ಯಶಸ್ಸಿಗೆ ಕಾರಣಳಾಗಿರುವ ಮುನ್ನಿಗೆ ಸಲ್ಲು ಭಾಯಿ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಭಜರಂಗಿ ಭಾಯಿಜಾನ್ ಚಿತ್ರ ನೋಡಿದ ಪ್ರೇಕ್ಷಕ ಸಲ್ಮಾನ್ ಖಾನ್ ಹಾಗೂ ಹರ್ಷಾಲಿ ನಟನೆಗೆ ಸೈ ಎಂದಿದ್ದಾರೆ. ಇದೇ ಖಷಿಯಲ್ಲೀಗ ಸಲ್ಲು ಹರ್ಷಾಲಿಗೆ ಆಕೆಯ ಶಿಕ್ಷಣಕ್ಕಾಗಿ 1.5 ಕೋಟಿ ರೂ. ಸ್ಕಾಲರ್‍ಶಿಪ್ ನೀಡಿದ್ದು ಆಕೆಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.

ಇನ್ನು ಹರ್ಷಾಲಿ ಈ ಚಿತ್ರಕ್ಕಾಗಿ 1 ತಿಂಗಳ ಕಾಲ ಶಾಲೆಗೆ ರಜೆ ಹಾಕಿ ಚಿತ್ರೀಕರಣದಲ್ಲಿ ತೊಡಗಿದ್ದಳು. ಇದೆಲ್ಲದರಿಂದ ಮನಸೋತ ಸಲ್ಮಾನ್ ಹರ್ಷಾಲಿಗಾಗಿ ಸ್ಕಾಲರ್‍ಶಿಪ್ ಉಡುಗೊರೆ ನೀಡಿದ್ದಾರೆ.

Write A Comment