ಜಪಾನ್ ಸರ್ಕಾರ ಉದ್ಯೋಗಿಗಳಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅಲ್ಲಿನ ಉದ್ಯೋಗಿಗಳು ವರ್ಷದಲ್ಲಿ ಐದು ದಿನ ಕಡ್ಡಾಯವಾಗಿ ರಜೆ ಪಡೆಯಲೇಬೇಕಂತೆ.
ಜಪಾನಿನ ಉದ್ಯೋಗಿಗಳಿಗೆ ವರ್ಷದಲ್ಲಿ 15 ದಿನ ರಜೆ ಇರುತ್ತೆ. ಆದರೆ ಅಲ್ಲಿನ ಉದ್ಯೋಗಿಗಳು ಒಂದು ದಿನವೂ ರಜೆ ತೆಗೆದುಕೊಳ್ಳುವುದಿಲ್ಲವಂತೆ. ಇದರಿಂದ ಕೆಲಸದ ಒತ್ತಡ ಜಾಸ್ತಿಯಾಗಿ ಆರೋಗ್ಯ ಹದಗೆಡುತ್ತಿದೆ. ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗ್ತಾ ಇದೆ.
ಇದರಿಂದ ಎಚ್ಚೆತ್ತಿರುವ ಸರ್ಕಾರ, ಪ್ರತಿಯೊಬ್ಬ ಕಾರ್ಮಿಕನೂ ವರ್ಷಕ್ಕೆ ಕಡ್ಡಾಯವಾಗಿ ಐದು ರಜೆ ಪಡೆಯಲೇಬೇಕೆಂಬ ನಿಯಮ ಜಾರಿಗೆ ತರಲು ಚಿಂತಿಸುತ್ತಿದೆ. ಭಾರತ ಮತ್ತು ಅಮೆರಿಕಾದಲ್ಲಿ 18 ರಜೆ ಸಿಗ್ತಾ ಇದೆ. ಆದರೆ ಎರಡೂ ದೇಶಗಳ ಜನರು ಇದು ಕಡಿಮೆ ಎನ್ನುತ್ತಿದ್ದಾರಂತೆ.