ರಾಷ್ಟ್ರೀಯ

ಎಲ್ಲಾ ಸಾವುಗಳನ್ನು ವ್ಯಾಪಂ ಹಗರಣಕ್ಕೆ ಲಿಂಕ್ ಮಾಡಬೇಡಿ: ಬಿಜೆಪಿ

Pinterest LinkedIn Tumblr

vypamನಾಗ್ಪುರ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದ ರಾಕೇಶ್ ಸಿಂಗ್ ಅವರು, ರಾಜ್ಯದಲ್ಲಿ ಸಂಭವಿಸಿದ ಎಲ್ಲಾ ನಿಗೂಢ ಸಾವುಗಳು ವ್ಯಾಪಂ ಹಗರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಶನಿವಾರ ಹೇಳಿದ್ದಾರೆ.

‘ಎಲ್ಲಾ 44 ನಿಗೂಢ ಸಾವುಗಳನ್ನು ವ್ಯಾಪಂ ಹಗರಣದೊಂದಿಗೆ ತಳಕು ಹಾಕಬೇಡಿ’ ಎಂದು ಜಬಲಪುರ್ ಸಂಸದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವ್ಯಾಪಂ ಹಗರಣವನ್ನು ಮೊದಲು ತನಿಖೆಗೆ ಆದೇಶಿಸಿದ್ದೇ ಶಿವರಾಜ್ ಸಿಂಗ್ ಚೌಹಾಣ್ ಅವರು ಎಂದು ಪಕ್ಷ ಮಹಾರಾಷ್ಟ್ರ ಉಸ್ತುವಾರಿಯಾಗಿರುವ ರಾಕೇಶ್ ಸಿಂಗ್ ಹೇಳಿದ್ದಾರೆ.

ಇನ್ನು ಇದೇ ವೇಳೆ ಮಹಾರಾಷ್ಟ್ರದ ಸಚಿವ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಂಗ್, ಅದು ವೈಯಕ್ತಿಕ ಆರೋಪಗಳು ಕೇಳಿಬಂದಿವೆ. ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಲ್ಲ ಎಂದರು.

Write A Comment