ಮಾಡುವ ವಿಧಾನ
1ಲೋಟ ಸ್ವಚ್ಛ ಮಾಡಿದ ರವೆ
1 ಮಧ್ಯಮ ಗಾತ್ರದ ಮಾವಿನ ಹಣ್ಣಿನ ರಸ
2/1 ಲೋಟ ಅಥವಾ ಅಗತ್ಯವಿದ್ದಷ್ಟುಸಕ್ಕರೆ
2 ಚಮಚ ತುಪ್ಪ, 1 ಲೋಟ (ಸುಮಾರು 1/4 ಲೀ.) ಹಾಲು
11/2 ಲೋಟ ನೀರು
ಗೋಡಂಬಿ, ಒಣ ದ್ರಾಕ್ಷಿ
ಮೊದಲಾದ ಡ್ರೈ ಫ್ರೂಟ್ಸ್,
ಕೇಸರಿ
3-4 ಹಸಿರು ಏಲಕ್ಕಿ
ತುಸು ದಾಳಿಂಬೆ ಕಾಳುಗಳು
ಮಾಡುವ ವಿಧಾನ
ಸಿಪ್ಪೆ ತೆಗೆದ ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಬಿಸಿ ತುಪ್ಪಕ್ಕೆ ರವೆ ಹಾಕಿ, ಬಣ್ಣ ಬದಲಾಗುವವರೆಗೂ ಹುರಿದು ಕೊಳ್ಳಿ. ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ.
ಬೇರೆಯದಾಗಿ ನೀರನ್ನು ಕಾಯಿಸಿಕೊಳ್ಳಿ. ಕಾದ ನೀರನ್ನು ಹುರಿದ ರವೆಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
ಅದಕ್ಕೆ ಸಕ್ಕರೆ ಹಾಗೂ ಹಾಲು ಸೇರಿಸಿ. ಒಂದೆರಡು ನಿಮಿಷಗಳ ನಂತರ ಮಾವಿನ ತಿರುಳನ್ನು ಸೇರಿಸಿ, ಚೆನ್ನಾಗಿ ಕದಡಿ.
ನಂತರ ಏಲಕ್ಕಿ ಪುಡಿ ಮತ್ತು ಕೇಸರಿಯನ್ನು ಸೇರಿಸಿ. ಒಂದೆರಡು ನಿಮಿಷಗಳ ಕಾಲ ಮುಚ್ಚಿಡಿ.
ಹಲ್ವಾ ರೆಡಿ. ಅದರ ಮೇಲೆ ದಾಳಿಂಬೆ ಕಾಳುಗಳನ್ನು ಹಾಕಿ ಬಡಿಸಿ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆಯೂ ಬಡಿಸಬಹುದು.