ಅಂತರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ಹೋರಾಟ: ಭಾರತ-ತಝಿಕಿಸ್ತಾನ ಪ್ರತಿಜ್ಞೆ; ಸಂಸ್ಕೃತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ

Pinterest LinkedIn Tumblr

000029B__ದುಶಾನ್ಬೆ, ಜು.13: ಭಯೋತ್ಪಾದನೆಯ ಭೀತಿಯನ್ನು ಎದುರಿಸುತ್ತಿರುವ ಭಾರತ ಹಾಗೂ ತಝಕಿಸ್ತಾನ ರಾಷ್ಟ್ರಗಳು ಈ ಪಿಡುಗಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ತಮ್ಮ ನಡುವಿನ ರಕ್ಷಣ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿವೆ.
ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆಯನ್ನು ವರ್ಧಿಸುವ ಜೊತೆಗೆ ರಕ್ಷಣಾ ಬಾಂಧವ್ಯವನ್ನೂ ಬಲಪಡಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಏಶ್ಯ ರಾಷ್ಟ್ರಗಳ ತನ್ನ ಎಂಟು ದಿನಗಳ ಪ್ರವಾಸದ ಕೊನೆಯ ಹಂತವಾಗಿ ರವಿವಾರ ತಝಿಕಿಸ್ತಾನ ತಲುಪಿದ್ದು, ಅಲ್ಲಿನ ಅಧ್ಯಕ್ಷ ಇಮಾಮುಲ್ ರಹ್ಮಾನ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ.
‘‘ಭಯೋತ್ಪಾದನೆಯ ಭೀತಿ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಆ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ನಡುವಿನ ಸಹಕಾರವನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಮೋದಿ ಹೇಳಿದ್ದಾರೆ.
ರಕ್ಷಣಾ ಸಹಕಾರವನ್ನು ವ್ಯೆಹಾತ್ಮಕ ಭಾಗಿದಾರಿಕೆಯ ದೃಢ ಸ್ತಂಭವೆಂದು ಬಣ್ಣಿಸಿರುವ ಮೋದಿಯವರು, ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ ಎಂದು ಹೇಳಿದ್ದಾರೆ.
ಭಾರತ ಹಾಗೂ ತಝಿಕಿಸ್ತಾನ ರಾಷ್ಟ್ರಗಳು ಪ್ರಾದೇಶಿಕ ಭದ್ರತೆ ಹಾಗೂ ಸಮೃದ್ಧಿಯಲ್ಲಿ ಪಾಲುದಾರರಾಗಿವೆ ಎಂದವರು ಅಭಿಪ್ರಾಯಿ ಸಿದ್ದಾರೆ.
ಭಾರತ ಹಾಗೂ ತಝಿಕಿಸ್ತಾನ ನಡುವೆ ಸಂಪರ್ಕವನ್ನು ಬಲಪಡಿಸುವ ಬಗ್ಗೆಯೂ ಉಭಯ ನಾಯಕರು ಈ ಸಂದರ್ಭದಲ್ಲಿ ಚರ್ಚಿಸಿದರು.
ಮಧ್ಯ ಏಶ್ಯ ಹಾಗೂ ದಕ್ಷಿಣ ಏಶ್ಯ ನಡುವೆ ಸಂಪರ್ಕ ಕಲ್ಪಿಸುವ ‘ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ’ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.
ಮಧ್ಯ ಏಶ್ಯದ ಎಲ್ಲ ರಾಷ್ಟ್ರಗಳ ಪೈಕಿ ತಝಿಕಿಸ್ತಾನ ವು ಭಾರತಕ್ಕೆ ಅತ್ಯಂತ ಸಮೀಪದಲ್ಲಿರುವ ರಾಷ್ಟ್ರವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಹಾಗೂ ವಾಣಿಜ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ಸಾರಿಗೆ ಸಂಪರ್ಕವು ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.
ಭಾರತೀಯ ಹೂಡಿಕೆಯಿಂದ ನಿರ್ಮಾಣಗೊಳ್ಳುತ್ತಿರುವ ಇರಾನ್‌ನ ಚಾಹ್‌ಬಹಾರ್ ಬಂದರಿನ ಬಗ್ಗೆ ಮೋದಿ ಪ್ರಸ್ತಾಪಿಸಿದರು.
ಭವಿಷ್ಯದ ರೂಪುರೇಷೆಗಳನ್ನು ಸಿದ್ಧಪಡಿಸಲು ಜಂಟಿ ನಿಯೋಗವೊಂದು ಸದ್ಯದಲ್ಲೇ ಸಭೆ ಸೇರಲಿದೆ ಎಂದವರು ಹೇಳಿದ್ದಾರೆ.

Write A Comment