ನವದೆಹಲಿ, ಜು. 13: ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಈವರೆಗೆ 18 ಮಂದಿ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶ, ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹವಾಮಾನ ಇಲಾಖೆಯ ಪ್ರಕಾರ ಇಂತಹ ಮಳೆ ಜು. 18ರವರೆಗೆ ಮುಂದುವರೆಯಲಿದೆಯಾದರೂ, ಮುಂದಿನ 48 ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಂಭವವಿದೆ.
ಹಿಮಾಚಲ ಪ್ರದೇಶದಲ್ಲಂತೂ ಭೂಕುಸಿತಗಳಿಂದಾಗಿ ನೂರಾರು ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಜನ ತಾವು ಹೋಗಬೇಕಾದ ಸ್ಥಳ ತಲುಪಲು ಹಲವಾರು ಮೈಲಿ ನಡೆದುಹೋಗಬೇಕಾಗಿದೆ.
ರಾಜಧಾನಿ ದೆಹಲಿಯಲ್ಲೂ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಅಲ್ಲಲ್ಲಿ ಕೆರೆಗಳಂತೆ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
