ರಾಷ್ಟ್ರೀಯ

ಬಾಂಬ್‌ ಬೆದರಿಕೆ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ

Pinterest LinkedIn Tumblr

10Fir12-13.qxp

ಹೊಸದಿಲ್ಲಿ: ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರುವ ಬಗ್ಗೆ ಗುರ್ಗಾಂವ್‌ನ ಕಾಲ್‌ ಸೆಂಟರ್‌ಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದ ಯಾವ ಪ್ರದೇಶ, ಯಾವ ವಿಮಾನದಲ್ಲಿ ಬಾಂಬ್‌ ಇದೆ ಎಂದು ಕರೆ ಮಾಡಿದ್ದ ವ್ಯಕ್ತಿ ನಿರ್ದಿಷ್ಟ ಮಾಹಿತಿ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾದ ಸಂಖ್ಯೆಯಿಂದ ಸಂಜೆ 5.35ಕ್ಕೆ ಕರೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇದೆ ಎಂದಷ್ಟೇ ಆ ವ್ಯಕ್ತಿ ತಿಳಿಸಿದ್ದರು. ಸಂಪೂರ್ಣ ಪರಿಶೀಲನೆ ನಡೆಸಿದ ಬಾಂಬ್‌ ನಿಷ್ಕ್ರಿಯ ದಳ ಯಾವುದೇ ಬಾಂಬ್‌ ಪತ್ತೆ ಆಗಿಲ್ಲ ಎಂದು ತಿಳಿಸಿದೆ.

Write A Comment