ಕರ್ನಾಟಕ

ಮುಂದುವರಿಯುತ್ತಲೇ ಇದೆ ಅನ್ನದಾತನ ಆತ್ಮಹತ್ಯೆ; ಸಾಲಬಾಧೆ ತಾಳಲಾರದೆ ಮತ್ತಿಬ್ಬರ ಆತ್ಮಹತ್ಯೆ

Pinterest LinkedIn Tumblr

farmers

ಗಂಗಾವತಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಿದ್ದಾಪುರದ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

60 ವರ್ಷದ ಶೇಖರ ಗೌಡ ಸಾಲಮರಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ಲಕ್ಷ ರು. ಕೈಸಾಲ ಮಾಡಿಕೊಂಡಿದ್ದ ಈತ, ಭೋಗ್ಯಕ್ಕೆ ಜಮೀನು ಪಡೆದು ಕೃಷಿ ಮಾಡುತ್ತಿದ್ದರು. ಆದರೆ ಸಾಲಬಾಧೆ ತಾಳಲಾರದೆ ಶೇಖರಗೌಡ ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಚಿತ್ರದುರ್ಗ ಜಿಲ್ಲೆ ಪುಣಜೂರು ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 38 ವರ್ಷದ ರಂಗಪ್ಪ ನೇಣಿಗೆ ಶರಣಾಗಿದ್ದಾರೆ. ರಂಗಪ್ಪ ಸುಮಾರು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಹೊಳೆಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Write A Comment