ಅಂತರಾಷ್ಟ್ರೀಯ

ಊಟ ಮಾಡಿ ಸತ್ತ 45 ಮಂದಿ ಇಸಿಸ್ ಉಗ್ರರು !

Pinterest LinkedIn Tumblr

issಜಗತ್ತಿಗೆ ಮಾರಕವಾಗಿ ಪರಿಣಮಿಸಿರುವ ಇಸಿಸ್ ಉಗ್ರರು ರಂಜಾನ್ ಮಾಸದ ಅಂಗವಾಗಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಊಟ ಮಾಡಿ 45 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಮೊಸಲ್ ನಗರದಲ್ಲಿ ಈ ಘಟನೆ ನಡೆದಿದ್ದು ಕಟ್ಟಾ ಮುಸ್ಲಿಂವಾದವನ್ನು ಪ್ರತಿಪಾದಿಸುತ್ತಿರುವ ಇಸಿಸ್ ಉಗ್ರರು ರಂಜಾನ್ ಅಂಗವಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಈ ಕೂಟದಲ್ಲಿ ಸರಿಸುಮಾರು 145 ಮಂದಿ ಉಗ್ರರು ಭಾಗವಹಿಸಿದ್ದರು.ಈ ಸಮಯದಲ್ಲಿ ಮೊದಲ ಹಂತವಾಗಿ 45ಮಂದಿ ಭರ್ಜರಿ ಭೋಜನ ಸವಿದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಹೊಟ್ಟೆ ನೋವು ಆರಂಭವಾಗಿದ್ದು ನೆಲದಲ್ಲಿ ಬಿದ್ದು ಹೊರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ರಕ್ತಪಾತದ ಮೂಲಕ ಜಿಹಾದ್ ಹೇರುವ ಯತ್ನ ನಡೆಸುತ್ತಿದ್ದ ಇಸಿಸ್ ಉಗ್ರರಿಗೆ ಪವಿತ್ರ ರಂಜಾನ್ ತಿಂಗಳಿನಲ್ಲಿ ನಡೆದ ಈ ಘಟನೆ ಒಂದು ಪಾಠವಾಗಿದ್ದಂತೂ ಸತ್ಯ.

Write A Comment