ಕೊಪ್ಪಳ,ಜು.9: ಲಾರಿಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಚಾಲಕರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ ತಾಲೂಕಿನ ಬೂದಗುಂಪಾ ಕ್ರಾಸ್ ಬಳಿ ಚಾಲಕನೊಬ್ಬನಿಗೆ ಪ್ಲಾಸ್ಟಿಕ್ ಚಾಕು ಹಿಡಿದು ಬೆದರಿಸಿ, 14 ಸಾವಿರ ನಗದು ಸೇರಿದಂತೆ ವಾಚ್‌ಅನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ವೇಳೆ ಆಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಆಕೆಯು ಬಳ್ಳಾರಿಯ ಮರಿಯಮ್ಮನಹಳ್ಳಿ ಮೂಲದವಳು ಎಂಬ ಮಾಹಿತಿ ಕಲೆಹಾಕಿ, ನಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಇಂತಹ ಕೃತ್ಯ ನಡೆಸುವ ದೊಡ್ಡ ಗ್ಯಾಂಗ್ ಇರುವುದು ಗೊತ್ತಾಗಿ ಈಗ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
