ಮನೋರಂಜನೆ

ಟರ್ಮಿನೇಟರ್ -ಜಿನಿಸಿಸ್: ಅರ್ನಾಲ್ಡ್ ಇಸ್ ಬ್ಯಾಕ್

Pinterest LinkedIn Tumblr

30ವಿಮರ್ಶಕರ ರೇಟಿಂಗ್ :
ಪಾತ್ರವರ್ಗ: ಅರ‌್ನಾಲ್ಡ್ , ಎಮಿಲಿ ಕ್ಲಾರ್ಕ್, ಜೇಸನ್ ಕ್ಲಾರ್ಕ್
ನಿರ್ದೇಶನ: ಅಲಾನ್ ಟೇಲರ್
ಓದುಗರ ರೇಟಿಂಗ್ :

* ಎಚ್. ಮಹೇಶ್

67 ವರ್ಷದ ಅರ್ನಾಲ್ಡ್ ‘ಟರ್ಮಿನೇಟರ್’ ಮತ್ತು ‘ಟ್ರೂ ಲೈಯ್ಸ್ ‘ ಚಿತ್ರದ ಮೂಲಕ ಭಾರತೀಯ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾದವರು. ಈಗ ಅವರು ‘ಟರ್ಮಿನೇಟರ್ -ಜಿನಿಸಿಸ್’ ಚಿತ್ರದ ಮೂಲಕ ಮತ್ತೊಮ್ಮೆ ಮಿಂಚಿದ್ದಾರೆ. ಅದೇ ಪ್ರಬುದ್ಧ ನಟನೆ ಮುಂದುವರಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಹಾಸ್ಯ ಮಿಶ್ರಿತ ಹದವಾದ ನಟನೆ ತುಂಬಾ ಇಷ್ಟವಾಗುತ್ತದೆ.ಅವರು ಈ ಸಿನಿಮಾದಲ್ಲಿ ಸುಮಾರು 20 ನಿಮಿಷದ ನಂತರ ಎಂಟ್ರಿ ಕೊಡುತ್ತಾರೆ. ಅಲ್ಲಿವರೆಗೂ ಆರ್ನಾಲ್ಡ್ ಎಲ್ಲಿ ಎಂದು ಕಾಯುತ್ತಾ ಕೂರುವುದೇ ಒಂದು ಥ್ರಿಲ್.

ಟರ್ಮಿನೇಟರ್ ಅಂತಹ ಚಿತ್ರಗಳಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚು ಮನ್ನಣೆ ಇರುತ್ತದೆ. ಇಲ್ಲಿ ನಿರ್ದೇಶಕ ಅಲಾನ್ ಟೇಲರ್ ಒಂದೊಳ್ಳೆ ಕತೆ ಹೆಣೆದಿದ್ದಾರೆ. ತನ್ನ ಅಮ್ಮನನ್ನು ರಕ್ಷಿಸಲು ಮಕ್ಕಳು 2017ರ ಜೀವನಕ್ಕೆ (ಅಂದರೆ ಭವಿಷ್ಯಕ್ಕೆ) ಹೋಗುತ್ತಾರೆ. ಯಂತ್ರಗಳು ಆಳ್ವಿಕೆ ನಡೆಸುವುದರ ವಿರುದ್ಧ ಜೇಸನ್ ಕ್ಲಾರ್ಕ್ ಸೆಟೆದು ನಿಲ್ಲುತ್ತಾನೆ. ಸ್ಕೈ ನೆಟ್‌ನ್ನು ನಾಶ ಮಾಡಲು ತಂತ್ರ ಹೂಡುತ್ತಾನೆ. ಮನುಷ್ಯರೇ ಸೃಷ್ಟಿಸಿದ ಯಂತ್ರಗಳು ಮನುಷ್ಯರ ಮೇಲೆ ಹಿಡಿತ ಸಾಧಿಸುವುದು ಸರಿಯಲ್ಲ ಎಂದು ಭಾವಿಸಿದ ಜೇಸನ್ ಕ್ಲಾರ್ಕ್, ಯಂತ್ರಗಳ ಶಕ್ತಿಯನ್ನು ಕೊಲ್ಲಲು ಮುಂದಾಗುತ್ತಾನೆ. ಯಂತ್ರಗಳ ಕಪಿಮುಷ್ಠಿಯಿಂದ ವಿಶ್ವವನ್ನು ತಪ್ಪಿಸುವ ಜವಾಬ್ದಾರಿಯನ್ನು ಅರ್ನಾಲ್ಡ್ ಹೊತ್ತುಕೊಳ್ಳುತ್ತಾರೆ.

ಚಿತ್ರದ ಪ್ರಾರಂಭದಲ್ಲಿ ತೋರಿಸುವ ದೃಶ್ಯಗಳು ನಿಜಕ್ಕೂ ಅದ್ಭುತವಾಗಿದ್ದು, ಎದೆ ನಡುಗುವಂತಿವೆ. ಹೀಗಾಗಿ ಚಿತ್ರದ ನಿಜವಾದ ಹೀರೋ ಅಂದರೆ ಗ್ರಾಫಿಕ್ಸ್ ತಂಡ ಎಂದು ನಿಸ್ಸಂಶಯವಾಗಿ ಹೇಳಬಹುದು. ಆ್ಯಕ್ಷನ್ ದೃಶ್ಯಗಳಂತೂ ರೋಚಕವಾಗಿವೆ.

ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳಲ್ಲಿ ಸ್ಪೆಶಲ್ ಎಫೆಕ್ಟ್ ತಂಡಕ್ಕೆ ಜಾಸ್ತಿ ಕೆಲಸ. ಈ ಚಿತ್ರದಲ್ಲೂ ಹಾಗೆ ಆಗಿದೆ. ಮಕ್ಕಳಿಗೆ ಚಿತ್ರ ಇಷ್ಟವಾಗುತ್ತದೆ. ರೋಮಾಂಚನಕಾರಿಯಾದ ಹೊಸ ಜಗತ್ತನ್ನು ನೋಡಬಹುದು. ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಲಾಗಿದೆ. ಆ್ಯಕ್ಷನ್ ಚಿತ್ರಕ್ಕೆ ಹೇಳಿ ಮಾಡಿಸಿದ ಹಿನ್ನೆಲೆ ಸಂಗೀತ ಇಲ್ಲಿದೆ. ಟರ್ಮಿನೇಟರ್ -1 ಚಿತ್ರದ ಮುಂದುವರಿದ ಭಾಗ ಇದಾಗಿದೆ. ಈ ಚಿತ್ರದ ವಿಶೇಷ ಎಂದರೆ, ಅರ್ನಾಲ್ಡ್ ಬಿಟ್ಟರೆ ಉಳಿದ ಕಲಾವಿದರೆಲ್ಲರೂ ಹೊಸಬರೇ. ಚಿತ್ರದ ಕ್ಲೈಮಾಕ್ಸ್ ಅಂತೂ ಅದ್ಭುತವಾಗಿದೆ. ಅದನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ನಮ್ಮ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಇಂಗ್ಲಿಷ್ ಸಬ್ ಟೈಟಲ್ ಹಾಕಿರುವುದರಿಂದ ಚಿತ್ರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

Write A Comment