ರಾಷ್ಟ್ರೀಯ

ಸ್ಕಿನ್ ಟೈಟ್ ಟೀ-ಶರ್ಟ್ ಧರಿಸುವ ಮುನ್ನ…

Pinterest LinkedIn Tumblr

12* ಶೀಲಾ ಸಿ. ಶೆಟ್ಟಿ
ಟೀ-ಶರ್ಟ್ ಫ್ಯಾಷನ್ ಎವರ್‌ಗ್ರೀನ್ ಫ್ಯಾಷನ್. ಹಾಗೆಂದು ಸ್ಕಿನ್ ಟೈಟ್ ಹಾಗೂ ಫುಲ್‌ಹೈನೆಕ್ ಟೀ ಶರ್ಟ್‌ಗಳು ಕೆಲವೊಮ್ಮೆ ಆರೋಗ್ಯಕ್ಕೂ ಮಾರಕವಾಗಬಹುದು. ಈ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೇ ಉತ್ತಮ.

ಸೀಸನ್‌ಗೆ ತಕ್ಕಂತೆ… ಬೇಸಿಗೆಯಲ್ಲಿ ಆದಷ್ಟೂ ಗಾಳಿಯಾಡುವಂತಹ ಉತ್ತಮ ಫ್ಯಾಬ್ರಿಕ್‌ನ ಟೀ-ಶರ್ಟ್ ಧರಿಸುವುದು ಉತ್ತಮ. ಅಷ್ಟು ಮಾತ್ರವಲ್ಲ, ಮೆಗಾ, ಹಾಫ್ ಸ್ಲೀವ್ ಟೀ ಶರ್ಟ್‌ಗಳು ಈ ಸೀಸನ್‌ಗೆ ಉತ್ತಮ. ಫುಲ್ ಸ್ಲಿವ್‌ನದ್ದು ಸ್ಕಿನ್ ಟ್ಯಾನ್ ಆಗದಂತೆ ತಡೆಯುತ್ತವೆ.

ಇನ್ನು ಮಾನ್ಸೂನ್‌ನಲ್ಲಿ ಫುಲ್ ಸ್ಲೀವ್ ಟೀ-ಶರ್ಟ್‌ಗಳು ಓಕೆ. ಇವು ಚಳಿ-ಗಾಳಿಯಿಂದ ರಕ್ಷಿಸುತ್ತವಲ್ಲದೇ ಚರ್ಮ ಒರಟಾಗುವುದನ್ನು ತಪ್ಪಿಸುತ್ತವೆ. ಇನ್ನು ಚಳಿಗಾಲದಲ್ಲೂ ಅಷ್ಟೇ, ತ್ವಚೆ ಹಾಗೂ ಚರ್ಮ ಬಿರುಕಾಗುವುದು ತಪ್ಪುತ್ತದೆ.

ಫ್ಯಾಬ್ರಿಕ್ ಗುಣಮಟ್ಟದಿರಲಿ ಹೌದು, ಧರಿಸುವ ಟೀ ಶರ್ಟ್ ಉತ್ತಮ ಗುಣಮಟ್ಟದ ಫ್ಯಾಬ್ರಿಕ್ ಹೊಂದಿರಬೇಕು. ಅಷ್ಟು ಮಾತ್ರವಲ್ಲ, ಬೆವರನ್ನು ಹೀರುವಂತಿರಬೇಕು. ಕೊಂಚ ಗಾಳಿಯಾಡುವಂತಿರಬೇಕು. ಆಗ ದೇಹಕ್ಕೆ ಹಿತವೆನಿಸುತ್ತದೆ. ಇನ್ನು ಪಾಲಿಯೆಸ್ಟರ್‌ನಂತಹ ನಾನಾ ಫ್ಯಾಬ್ರಿಕ್‌ನ ಟೀ ಶರ್ಟ್‌ಗಳು ನೋಡಲು ಆಕರ್ಷಕವಾಗಿ ಕಾಣುತ್ತವೆಯಾದರೂ ಇವು ಗಾಳಿಯಾಡಲು ಆಸ್ಪದ ನೀಡುವುದಿಲ್ಲ.

ಸ್ಕಿನ್ ಟೈಟ್ ಸ್ಕಿನ್ ಟೈಟ್ ಟೀ ಶರ್ಟ್‌ಗಳನ್ನು ಹೆಚ್ಚಾಗಿ ಬ್ಲೇಝರ್ ಹಾಗೂ ಕೋಟಿನೊಳಗೆ ಧರಿಸಲು ಬಳಸುತ್ತಾರೆ. ಇವು ಚರ್ಮದ ಅಲರ್ಜಿಯುಂಟು ಮಾಡಬಹುದು. ಇಲ್ಲವೇ ರ‌್ಯಾಶಸ್ ಮೂಡಬಹುದು ಎನ್ನುತ್ತಾರೆ ವೈದ್ಯರು. ಅವರ ಪ್ರಕಾರ, ಸ್ಟೈಲ್ ಹೆಸರಲ್ಲಿ ಆರೋಗ್ಯಕ್ಕೆ ಮಾರಕವಾಗುವಂತಹ ಸ್ಕಿನ್ ಟೀ ಶರ್ಟ್ ಧರಿಸುವುದು ತರವಲ್ಲ ಎನ್ನುತ್ತಾರೆ. —–

ಉತ್ತಮ ಫ್ಯಾಬ್ರಿಕ್‌ನ ಸ್ಕಿನ್ ಟೈಟ್ ಟೀ ಶರ್ಟ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ಇವು ಚರ್ಮಕ್ಕೆ ಅಲರ್ಜಿಯುಂಟುಮಾಬಹುದು. – ಸೂರಜ್, ಮಾಡೆಲ್

Write A Comment