ಮನೋರಂಜನೆ

ಶಾಹಿದ್ ವೆಡ್ಸ್ ಮೀರಾ

Pinterest LinkedIn Tumblr

shahid-kapoor-mira-rajputನವದೆಹಲಿ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಮ್ಮ ಬಹು ದಿನಗಳ ಬ್ಯಾಚುಲರ್ ಲೈಫ್‌ಗೆ ಮಂಗಳವಾರ ಗುಡ್‌ಬೈ ಹೇಳಿದ್ದಾರೆ.

ಹೌದು, ಮಾಧ್ಯಮಗಳ ವರದಿಯ ಪ್ರಕಾರ, ಇಂದು ಬೆಳಗ್ಗೆಯೇ ಬಾಲಿವುಡ್ ಹ್ಯಾಂಡ್‌ಸಮ್ ಬಾಯ್ ಶಾಹಿದ್ ಕಪೂರ್ ದೆಹಲಿ ಮೂಲದ ಮೀರಾ ರಜಪೂತ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕೇವಲ 40-50 ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ದೆಹಲಿಯ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ವೊಂದರಲ್ಲಿ ದೆಹಲಿ ಹುಡುಗಿ ಮೀರಾಳನ್ನು ಶಾಹಿದ್ ವರಿಸಿದ್ದಾರೆ.

ಚಿತ್ರರಂಗವನ್ನು ಬಿಟ್ಟು ಬೇರೆ ಕ್ಷೇತ್ರದವರನ್ನು ಮದುವೆಯಾಗಬೇಕೆಂಬುದು ಶಾಹಿದ್ ಕಪೂರ್ ಅವರ ಅಭಿಲಾಷೆಯಾಗಿತ್ತು. ಅವರ ಆಸೆಯಂತೆ ಇದೀಗ ಚಿತ್ರರಂಗವನ್ನು ಬಿಟ್ಟು ಬೇರೆ ಕ್ಷೇತ್ರದ ಹುಡಿಗಿಯನ್ನೇ ವರಿಸಿದ್ದಾರೆ.

Write A Comment