ರಾಷ್ಟ್ರೀಯ

ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆ: ನವಜಾತ ಶಿಶು ಸಾವು

Pinterest LinkedIn Tumblr

infant-baby

ನವದೆಹಲಿ: ದಾಖಲು ಮಾಡಿಕೊಳ್ಳಲು ಆಸ್ಪತ್ರೆ ನಿರಾಕರಿಸಿದ ಕಾರಣಕ್ಕೆ ಚಿಕಿತ್ಸೆ ಲಭ್ಯವಾಗದೆ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ಮಂಗಳವಾರ ನಡೆದಿದೆ.

ಅವಧಿಗೂ ಮುನ್ನವೇ ಮಗುವೊಂದು ದೆಹಲಿಯ ನರ್ಸಿಂಗ್ ಹೋಮ್ ಒಂದರಲ್ಲಿ ಜನನವಾಗಿದ್ದು, ಮಗು ಹುಟ್ಟಿ 1 ದಿನವಾಗಿತ್ತು. ಆದರೆ, ಮಗುವಿಗೆ ನೆಂಟಿಲೇಟರ್ ಅವಶ್ಯಕವಿದ್ದು, ಈ ಸೌಲಭ್ಯ ನಮ್ಮ ನರ್ಸಿಂಗ್ ಹೋಮ್ ನಲ್ಲಿ ಇಲ್ಲ ಎಂದು ಅಲ್ಲಿನ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲು ಹಣವಿಲ್ಲ ಕಾರಣ ಪೋಷಕರು ಸರ್ಕಾರಿ ಆಸ್ಪತ್ರೆಗಳಾದ ಮನೋಹರ್ ಲೋಹ್ಯಾ ಮತ್ತು ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ ಎಂಬ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಈ ಎರಡೂ ಸರ್ಕಾರಿ ಆಸ್ಪತ್ರೆಗಳಲ್ಲೂ ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಆ್ಯಂಬುಲೆನ್ಸ್ ನಲ್ಲಿ ಹಸುನೀಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಈಗಾಗಲೇ ಪ್ರತಿಕ್ರಿಯೆ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಕುಮಾರ್ ಜೈನ್ ಅವರು, ಎರಡು ಆಸ್ಪತ್ರೆಯಲ್ಲೂ ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಲು ಕಾರಣವೇನು ಎಂಬುದರ ಕುರಿತಂತೆ  ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

Write A Comment